ಮೂಡುಬಿದಿರೆ: ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಪ್ರಬಂಧಕ ಐ. ಮೋಹನದಾಸ್ ಪ್ರಭು (69ವ) ಅಲ್ಪಕಾಲದ ಅಸೌಖ್ಯದಿಂದ ಅ 18 ರಂದು ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂರು ದಶಕಗಳ ಕಾಲ ಕಾರ್ಪೋರೇಶನ್ ಬ್ಯಾಂಕಿನ ದೆಹಲಿ, ಮೈಸೂರು, ಮಂಗಳೂರು, ಮೂಡುಬಿದಿರೆ ಹೀಗೆ ಹಲವು ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ವ್ಯಾವಹಾರಿಕ ದಕ್ಷತೆಗಾಗಿ ಬ್ಯಾಂಕಿನ ಆಂತರಿಕ ಗೌರವಗಳಿಗೆ ಪಾತ್ರರಾಗಿದ್ದರು.
ಎಳೆಯ ವಯಸ್ಸಿನಲ್ಲಿ ಯಕ್ಷಗಾನ, ರಂಗ ನಟರಾಗಿ, ಸಂಕೀರ್ತನೆ, ಹರಿಕಥಾ ರಂಗದಲ್ಲಿ ಸಕ್ರಿಯರಾಗಿ ದೈವಕ್ಕೆ ಮದಿಪು ಹೇಳುವಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.
Tags
Obituary