ಮುಂಬಯಿ, (ಆರ್ಬಿಐ) ಜೂ.28: ನವದೆಹಲಿಯಲ್ಲಿ ಇತ್ತೀಚಿಗೆ (ಜೂ.23) ರಂದು ಝೀ ಮೀಡಿಯಾ ಸಂಸ್ಥೆಯು ಆಯೋಜಿಸಿದ್ದ ಪ್ರತಿಷ್ಠಿತ ಝೀ ಎಡ್ಯುಫ್ಯೂಚರ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಯನ್ ಶಿಕ್ಷಣ ಸಮೂಹಕ್ಕೆ "ವರ್ಷದ ಅತ್ಯುತ್ತಮ ಶಾಲಾ ಸರಪಳಿ 2023" ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿತು. ಶಿಕ್ಷಣ ಕ್ಷೇತ್ರದ ಗಣ್ಯರು ಮತ್ತು ದಿಗ್ಗಜರ ಉಪಸ್ಥಿತಿಯಲ್ಲಿ ರಾಯನ್ಸ್ ನಿರ್ದೇಶಕಿ ಸೋನಾಲ್ ಪಿಂಟೊ ಪ್ರಶಸ್ತಿಯನ್ನು ಸ್ವೀಕರಿಸಿದರು.
ಝೀ ಮೀಡಿಯಾದ ಝೀ ಶಿಕ್ಷಣ ಭವಿಷ್ಯ ಉತ್ಕöÈಷ್ಟ ಪ್ರಶಸ್ತಿ-2023ರ ತೃತೀಯ ಆವೃತ್ತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಿದ ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಶಿಕ್ಷಕರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಝೀ ಮೀಡಿಯಾ ತಿಳಿಸಿದೆ.
ಈ ಪುರಸ್ಕಾರ ಮತ್ತು ಮನ್ನಣೆಯು ರಾಯನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಕಾರ್ಯಾಧ್ಯಕ್ಷ ಡಾ| ಎ.ಎಫ್. ಪಿಂಟೊ ಅವರ ದೂರದೃಷ್ಟಿ ಮತ್ತು ಆಡಳಿತ ನಿರ್ದೇಶಕಿ ಡಾ| ಮೇಡಂ ಗ್ರೇಸ್ ಪಿಂಟೊ ಅವರ ಮಾರ್ಗದರ್ಶಕದಲ್ಲಿ ದೇಶದಾದ್ಯಂತ ರಾಯಾನ್ ಗ್ರೂಪ್ ಆಫ್ ಸ್ಕೂಲ್ಸ್ ಜಾರಿಗೊಳಿಸಿದ ಶ್ರೇಷ್ಠತೆ ಮತ್ತು ಸಮಗ್ರ ಅಭಿವೃದ್ಧಿಯ ಮತ್ತೊಂದು ಸಾಕ್ಷಿಯಾಗಿದೆ. ಶೈಕ್ಷಣಿಕ ಮುನ್ನಡೆಯ ನಮ್ಮ ಎಲ್ಲಾ ಪ್ರಯತ್ನಗಳಿಗೆ ವಿದ್ಯಾಥಿüðಗಳ ಪೋಷಕರ, ಶಿಕ್ಷಕ ವೃಂದದ ಅವಿರತ ಶ್ರಮ, ವಿದ್ಯಾರ್ಥಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ರಾಯನ್ ಪರಿವಾರ ಕೃತಜ್ಞರಾಗಿದೆ ಎಂದಿದ್ದಾರೆ.