ಟೂತ್ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವ್ಯಕ್ತಿ ಸಾವು

ಪಡುಬಿದ್ರಿ : ಟೂತ್ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಹಲ್ಲುಜ್ಜಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.



ಮೃತರನ್ನು ವೆಂಕಪ್ಪ (53) ಎಂದು ಗುರುತಿಸಲಾಗಿದೆ. ಇವರು ನ.1ರಂದು ಬೆಳಗ್ಗೆ ಬಚ್ಚಲು ಮನೆಯಲ್ಲಿ ಟೂತ್ ಪೇಸ್ಟ್ ಎಂದು ಭಾವಿಸಿ ಅಲ್ಲಿಯೇ ಇದ್ದ ಇಲಿ ಪಾಷಾಣವನ್ನು ಬಳಸಿ ಹಲ್ಲು ಉಜ್ಜಿದ್ದರು.

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರು, ನ.6ರಂದು ಸಂಜೆ ವೇಳೆ ಮುಕ್ಕಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಟೈಮ್ಸ್ ಆಫ್ ಬೆದ್ರ


Previous Post Next Post

Contact Form