ನದಿಯ ಸೇತುವೆ ಬಳಿ ಬೆಳ್ಳಂಬೆಳಗ್ಗೆ ಸ್ನಾನ ಮಾಡಲು ನದಿಗೆ ಇಳಿದ ಐವರ ಪೈಕಿ ಮೂವರು ನೀರು ಪಾಲಾಗಿರುವ ಘಟನೆ ನಡೆದಿದೆ.
ತುಮಕೂರು ಮೂಲದ ಗವಿ ರಂಗ 19 ವರ್ಷ ರಾಕೇಶ್ 19 ವರ್ಷ ಹಾಗೂ ಅಪ್ಪು 16 ವರ್ಷದ ಅಯ್ಯಪ್ಪ ಮಾಲದಾರಿಗಳು ಕಪಿಲಾ ನದಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಅಯ್ಯಪ್ಪನ ದರ್ಶನ ಮುಗಿಸಿಕೊಂಡು ತಡರಾತ್ರಿ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡುವ ಸಲುವಾಗಿ ಆಗಮಿಸಿದ ಅಯ್ಯಪ್ಪ ಭಕ್ತರು ಬೆಳಂಬೆಳಗ್ಗೆ ಸ್ನಾನ ಮಾಡಿ ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದರ್ಶನ ಮಾಡುವ ಸಲುವಾಗಿ ಸ್ನಾನಕ್ಕೆಂದು ಕಪಿಲಾ ನದಿಯ ಹೆಜ್ಜೆಗೆ ಸೇತುವೆಯ ಬಳಿ 5 ಜನ ಮಾಲಾದಾರಿಗಳು ನೀರಿಗಿಳಿದು ಸುಳಿಗೆ ಸಿಲುಕಿದ ಪರಿಣಾಮ ಮೂವರು ಮೇಲೆಳಲಾಗದೆ ಮೃತಪಟ್ಟರೆ ಇಬ್ಬರು ಮಾಲದಾರಿಗಳು ಜೀವ ರಕ್ಷಿಸಿಕೊಂಡಿದ್ದಾರೆ.
ನಂಜನಗೂಡು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮೃತಪಟ್ಟ ಮೂರು ಮಂದಿ ಮಾಲಾಧಾರಿಯ ಶವಗಳನ್ನು ಹೊರ ತೆಗೆಯಲಾಗಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ.