ಆರೂವರೆ ಕೋಟಿ ವೆಚ್ಚದಲ್ಲಿ ಕ್ಷೇತ್ರ ನವೀಕರಣ
ಶಿರ್ತಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಅರ್ಜುನಾಪುರ ಶಿರ್ತಾಡಿ-ವಾಲ್ಪಾಡಿ ಇಲ್ಲಿಯ ನವೀಕೃತ ದೇವಾಲಯದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ, ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜ. ೧೭ರಿಂದ ಪ್ರಾರಂಭಗೊಂಡು ೨೬ರವರೆಗೆ ನಡೆಯಲಿರುವುದಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸೇವಾ ಸಮಿತಿಯ ಅಧ್ಯಕ್ಷ ಬಲರಾಮ ಪ್ರಸಾದ್ ಭಟ್ ತಿಳಿಸಿದ್ದಾರೆ.
ಜ. ೧೭ರಂದು ಪೂರ್ವಾಹ್ನ ಗಂಟೆ ೭.೦೦ರಿಂದ ತೋರಣ ಮುಹೂರ್ತ ಸಹಿತ ಧಾರ್ಮಿಕ ಕಾರ್ಯಕ್ರಮಗಳು, ಸಾಯಂಕಾಲ ವಾಸ್ತುಪೂಜೆ, ಶಕ್ತಿ ಕಲಶ ಪ್ರತಿಷ್ಠೆ ಸಹಿತ ವಿಧಿ ವಿಧಾನಗಳು, ಭಜನೆ, ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರಗಲಿದೆ.
ಜ. ೧೮ರಂದು ಗಣಯಾಗ, ಅಂಕುರ ಪೂಜೆ, ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಯಾಗ, ಭಜನೆ, ಸಾಯಂಕಾಲ ಅಘೋರಾಸ್ತ್ರ ಹೋಮ, ಭಜನೆ, ರಾತ್ರಿ ಅಜ್ಜಿಗ್ ಏರ್‍ಲಾ ಇಜ್ಜಿ ಹಾಸ್ಯಮಯ ನಾಟಕ ನಡೆಯಲಿದೆ.
ಜ. ೧೯ರಂದು ಬೆಳಿಗ್ಗೆ ಗಂಟೆ ೮.೦೦ರಿಂದ ಮಹಾಮೃತ್ಯುಂಜಯ ಯಾಗ, ಭಜನೆ, ಸಾಯಂಕಾಲ ಸುದರ್ಶನಯಾಗ, ದುರ್ಗಾನಮಸ್ಕಾರ ಪೂಜೆ, ಪಾಶುಪತಾಶ್ತ್ರ ಹೋಮ, ಭಜನೆ, ರಾತ್ರಿ ದೇವರ್ ಕೈಬುಡುವೆರಾ ತುಳು ನಾಟಕ ಜರಗಲಿದೆ.
ಜ. ೨೦ರಂದು ಬೆಳಿಗ್ಗೆ ಗಂಟೆ ೮.೦೦ರಿಂದ ೧೦೮ ಕಾಯಿ ಮಹಾ ಗಣಯಾಗ, ಚೋರಶಾಂತಿ, ಭಜನೆ, ಸಾಯಂಕಾಲ ದುರ್ಗಾನಮಸ್ಕಾರ ಪೂಜೆ, ವನದುರ್ಗಾ ಹೋಮ, ಸುಬ್ರಹ್ಮಣ್ಯ ನಾವುಡ ತಂಡದವರಿಂದ ಭರತನಾಟ್ಯ ನೃತ್ಯ ರೂಪಕ ನಡೆಯಲಿದೆ.
ಜ. ೨೧ರಂದು ಬೆಳಿಗ್ಗೆ ಗಂಟೆ ೮.೩೦ರಿಂದ ವೇದಪಾರಾಯಣ, ಭಜನೆ, ಮಧ್ಯಾಹ್ನ ಗಂಟೆ ೩.೦೦ರಿಂದ ಶಿರ್ತಾಡಿ ಗ್ರಾಮ ಪಂಚಾಯತ್ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ, ವಿವಿಧ ಭಜನಾ ತಂಡಗಳು ಹಾಗೂ ವಿನೋದಾವಳಿಗಳೊಂದಿಗೆ ನಡೆಯಲಿದೆ. ಸಾಯಂಕಾಲ ಅನ್ನದಾನದ ಮಹಾ ಉಗ್ರಾಣ ಮುಹೂರ್ತ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಸೇವೆಯಾಟ ಜರಗಲಿದೆ.
ಜ.೨೨ರಂದು ಬೆಳಿಗ್ಗೆ ಗಂಟೆ ೭.೦೦ರಿಂದ ಶತರುದ್ರಾವರ್ತನ ಪೂರ್ವಕ ಮಹಾರುದ್ರಯಾಗ, ಶಾಂತಿ ಹೋಮ ಗಳು, ಶಂಕರಪ್ರೋಕ್ತ ಪ್ರಾಯಶ್ಚಿತ ಹೋಮಗಳು, ಸಾಯಂಕಾಲ ಗಂಟೆ ೫.೦೦ರಿಂದ ಅಂಕುರಪೂಜೆ, ಕಲಶ ಮಂಟಪ ಸಂಸ್ಕಾರ, ಜನಪದ ಗೀತೆ ಮತ್ತು ರಂಗಸಂಗೀತ, ರಾತ್ರಿ ಭರತನಾಟ್ಯ ಜರಗಲಿದೆ.
ಜ. ೨೩ರಂದು ಬೆಳಿಗ್ಗೆ ಗಂಟೆ ೮.೦೦ರಿಂದ ಸಾಮಾನ್ಯ ಪ್ರಾಯಶ್ಚಿತ್ತ ಹೋಮಗಳು, ಬಾಲಾಲಯದಲ್ಲಿ ಸಂಹಾರ ತತ್ತ್ವ, ಕಲಾ ಸಂಕೋಚ ಪ್ರಕ್ರಿಯೆ, ಮಹಾಚಂಡಿಕಾಯಾಗ, ಸಾಯಂಕಾಲ ಗಂಟೆ ೫.೦೦ರಿಂದ ಶ್ರೀ ಮಹಾಲಿಂಗೇಶ್ವರ ಪರಿವಾರ ದೇವರುಗಳ ಬಿಂಬ ಶಯ್ಯಾಧಿವಾಸ ಪ್ರಕ್ರಿಯೆ, ಭದ್ರಕಾ ಮಂಡಲ ಪೂಜೆ, ಪ್ರತಿಷ್ಠಾ ಹೋಮಗಳು, ನಾಗಬನದಲ್ಲಿ ವಾಸ್ತ್ವಾದಿ ಪ್ರಕ್ರಿಯೆ ನಂತರ ಶಿವಪಂಚಾಕ್ಷರಿ ಮಹಿಮೆ ಕಟೀಲು ಯಕ್ಷಗಾನ ಜರಗಲಿದೆ.
ಜ. ೨೪ರಂದು ಬೆಳಿಗ್ಗೆ ಗಂಟೆ ೫.೦೦ರಿಂದ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಗಣಪತಿ ದುರ್ಗಾದೇವಿ, ವೀರಭದ್ರ ಪ್ರತಿಷ್ಠೆ, ನಾಗಬ್ರಹ್ಮಾದಿ ದೇವರುಗಳ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಶ್ರೀ ಕುಕ್ಕಿನಂತಾಯ, ಶ್ರೀ ಕೊಡಮಣಿತ್ತಾಯ ದೈವಗಳ ಮಂಚ ಪ್ರತಿಷ್ಠೆ ಜರಗಲಿದೆ. ಉಡುಪಿ ಪಲಿಮಾರು ಮಠದ ಹಿರಿಯ ಪೀಠಾಧಿಪತಿಗಳು, ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಲಿದ್ದಾರೆ. ನಂತರ ಮಹಾಬಲಿಪೀಠ ಪ್ರತಿಷ್ಠೆ, ಕ್ಷೇತ್ರಪಾಲಾದಿ ಪ್ರತಿಷ್ಠೆ, ಬಲಿಶಿಲಾ ಪ್ರತಿಷ್ಠೆ, ತತ್ವಹೋಮ, ಮಹಾಪೂಜೆ ನಡೆಯಲಿದೆ.ಗಂಟೆ ೯.೩೦ರಿಂದ ಶ್ರೀರಾಮ ಕ್ಷೇತ್ರ ಕನ್ಯಾಡಿ ಜಗದ್ಗುರು ಪೀಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಚನ ಹಾಗೂ ಧಾರ್ಮಿಕ ಸಭೆ, ಅಪರಾಹ್ನ ಗಂಟೆ ೨.೩೦ಕ್ಕೆ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರ ಗೀತಾಸಾಹಿತ್ಯ ಸಂಭ್ರಮ, ಸಾಯಂಕಾಲ ಬ್ರಹ್ಮಕಲಶಾಧಿವಾಸ ಪ್ರಕ್ರಿಯೆ, ನೃತ್ಯ ಸಂಗೀತ, ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ಭಜನ್ ಸಂಗೀತ ನಡೆಯಲಿದೆ.
ಜ. ೨೫ರಂದು ಬೆಳಿಗ್ಗೆ ಗಂಟೆ ೭.೦೦ರಿಂದ ಮಹಾಲಿಂಗೇಶ್ವರ ದೇವರಿಗೆ ತ್ರಿಶತ ಕಲಶಾಭಿಷೇಕ ಪೂರ್ವಕ ಬ್ರಹ್ಮಕಲಶಾಭಿಷೇಕ, ದುರ್ಗಾ, ಗಣಪತಿ ದೇವರಿಗೆ ಅಷ್ಟೋತ್ತರ ಶತ ಕಲಶಾಭಿಷೇಕ ಪೂರ್ವಕ ಬ್ರಹ್ಮಕಲಶಾಭಿಷೇಕ ಜರಗಲಿದೆ. ಗಂಟೆ ೯.೩೦ರಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಟೀಲು ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆ, ಮಧ್ಯಾಹ್ನ ಮಹಾಪೂಜೆ, ಉತ್ಸವ ನಂತರ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಅಮೃತ ಅಡಿಗ ಭಾಗವತಿಕೆಯಲ್ಲಿ ಯಕ್ಷಗಾನ ವೈಭವ, ಸಾಯಂಕಾಲ ಬಲಿ ಉತ್ಸವ, ಸಂಗೀತ ಗಾನ ಸಂಭ್ರಮ, ರಾತ್ರಿ ಗಂಟೆ ೮.೦೦ರಿಂದ ಮಹಾರಂಗಪೂಜೆ, ಶ್ರೀ ಮಹಾಲಿಂಗೇಶ್ವರ ದೇವರ ಮಹೋತ್ಸವ, ದೈವಗಳ ನೇಮ, ದೈವ-ದೇವರ ಭೇಟಿ ಜರಗಲಿದೆ.
ಜ. ೨೬ರಂದು ಮಂಗಳ ಗಣಯಾಗ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.