ಕುದ್ರೋಳಿ ಕ್ಷೇತ್ರದಲ್ಲಿ ಅನಿತಾ ತಾಕೊಡೆ ರಚಿತ `ಸುವರ್ಣಯುಗ' ಕೃತಿ ಬಿಡುಗಡೆ

Suvarna Yuga Book Release
ಜಯ ಸುವರ್ಣರು ವ್ಯಕ್ತಿಕ್ಕಿಂತಲೂ ಶಕ್ತಿಯಾಗಿದ್ದರು : ಮಾಜಿ ಸಚಿವ ಜನಾರ್ದನ ಪೂಜಾರಿ

ಮುಂಬಯಿ (ಆರ್‌ಬಿಐ), ಜ.15: ಮಂಗಳೂರು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಜಯ ಸಿ. ಸುವರ್ಣ ಸಭಾಂಗಣದಲ್ಲಿ ಕಳೆದ ರವಿವಾರ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ನಾಡಿನ ಹೆಸರಾಂತ ಲೇಖಕಿ, ಅನಿತಾ ಪಿ.ತಾಕೊಡೆ ರಚಿತ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಿಸಿರುವ `ಸುವರ್ಣಯುಗ' ಕೃತಿ ಬಿಡುಗಡೆ ಗೊಳಿಸಿದರು.

ಜಯ ಸಿ. ಸುವರ್ಣ ಅವರ ಸುಪುತ್ರ, ಭಾರತ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ತ ಭವ್ಯ ಕಾರ್ಯಕ್ರಮದಲ್ಲಿ ಶ್ರೀಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ರೂವಾರಿಯೂ ಆದ  ಜನಾರ್ದನ ಪೂಜಾರಿ `ಸುವರ್ಣಯುಗ' ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಜಯ ಸುವರ್ಣರು ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು. ಬಿಲ್ಲವ ಮಹಾಮಂಡಲದ ಸಂಸ್ಥಾಪಕರು, ಭಾರತ್ ಬ್ಯಾಂಕ್‌ನ ಸರ್ವೋಭಿವೃದ್ಧಿಯ ರೂವಾರಿ ಆಗಿದ್ದು  ಸುವರ್ಣ ರಂತಹ ಮತ್ತೊಬ್ಬ ವ್ಯಕ್ತಿಯನ್ನು ನಾವು ಜನ್ಮದಲ್ಲಿ ನಾವು ಕಾಣಲು ಸಾಧ್ಯವಿಲ್ಲ ಎಂದರು.

ಜಯ ಸುವರ್ಣರ ಸಾವಿನ ಸುದ್ದಿ ತಿಳಿದು ನಾನು ಕಣ್ಣೀರು ಹಾಕಿದೆ. ನನ್ನ ಮತ್ತು ಸುವರ್ಣರ ಬಾಂಧವ್ಯ ಅಂತಹುದು. ನನ್ನ ತಂದೆತಾಯಿ ನಿಧನರಾಗಲೂ ಈ ರೀತಿ ದುಃ ಖಿಸಿರಲಿಲ್ಲ. ಅಂತಹ ವ್ಯಕ್ತಿ ನನ್ನ ಜೀವನದಲ್ಲಿ ಮತ್ತೊಬ್ಬರು ಸಿಕ್ಕಿಲ್ಲ. ಅವರನ್ನು ಈ ಸಮಾಜಕ್ಕೆ ಮತ್ತೆ ಯಾವ ರೀತಿ ತರಬಹುದೆಂದು ಯೋಚಿಸಿ ಕಣ್ಣೀರು ಹಾಕಿದ್ದೆ ಎಂದು ಜನಾರ್ದನ ಪೂಜಾರಿ ಯವರು ತನ್ನ ಮಿತ್ರತ್ವವನ್ನು ಭಾವುಕರಾಗಿ ಜನಾರ್ದನ ಪೂಜಾರಿ ತೆರೆದಿಟ್ಟರು.









ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಸಾಮಾಜಿಕ ಚಿಂತಕ ಜಯ ಸುವರ್ಣ ಅವರ ವ್ಯಕ್ತಿತ್ವದ ಬಗ್ಗೆ  ಅಭಿಮಾನ ವ್ಯಕ್ತಪಡಿಸಿ ಜೀವನದಲ್ಲಿ ರೂಢಿಸಿಕೊಂಡು ಎಲ್ಲ ಸಮಾಜವನ್ನು ಪ್ರೀತಿಸಿ, ಗೌರವಿಸಿ ಸಹಕಾರ ನೀಡಿದವರು ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್ ಸಾಯಿರಾಂ, ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್, ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸತ್ಯಜಿತ್ ಸುರತ್ಕಲ್, ಹರಿಕೃಷ್ಣ ಬಂಟ್ವಾಳ್, ಸತ್ಯಜಿತ್ ಸುರತ್ಕಲ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರಡಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಹರಿಕೃಷ್ಣ ಬಂಟ್ವಾಳ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪಿತಾಂಬರ ಹೆರಾಜೆ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೇರಾ, ಗೀತಾಂಜಲಿ ಸುವರ್ಣ, ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕೃತಿಕರ್ತೆ  ಅನಿತಾ ಪಿ.ತಾಕೋಡೆ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

ಮೋಹನ್ ಪಡೀಲ್ ಪ್ರಾರ್ಥನೆಯನ್ನಾಡಿದರು. ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಅಭಿನಂದನಾ ನುಡಿಗಳನ್ನಾಡಿದರು. ನಿವೃತ್ತ ಪ್ರಾಧ್ಯಾಪಕ ಅಡ್ಡೆ ರವೀಂದ್ರ ಪೂಜಾರಿ ಕೃತಿ ಪರಿಚಯಗೈದರು. ಚಂದ್ರಹಾಸ್ ಕಳಂಜ ಮತ್ತು ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Previous Post Next Post

Contact Form