ಮೂಡುಬಿದಿರೆ, ಜ.14: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ಬಾಲರಾಮ (ರಾಮಲಲ್ಲಾ) ಮೂರ್ತಿ ಪ್ರಾಣ ಪ್ರತಿಷ್ಠೆಯ ಶುಭದಿನವಾದ ಜ.22ರಂದು ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸಂಭ್ರಮೋತ್ಸವ ನಡೆಯಲಿದೆ.
ಅಂದು ಶ್ರೀದೇವಳದಲ್ಲಿ ವಿಶೇಷ ಪೂಜೆ, ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ವಿವಿಧ ಮಂಡಳಿಗಳಿಂದ ಭಜನೆ, ರಾತ್ರಿ 7ರಿಂದ ದೀಪೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ ಎಂದು ಶ್ರೀದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
Tags
Ashwathapura
