ಮಂಗಳೂರು: ಮನೆ ಕೆಲಸಕ್ಕೆ ಇದ್ದ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾದ ಘಟನೆ ನಡೆದಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಸವಣೂರು ಮಾರುತಿಪುರದ ಪೂಜಾ ಲಾಮಣಿ (20) ನಾಪತ್ತೆಯಾಗಿಯುವ ಯುವತಿ.
ಮನೆಯಲ್ಲಿರುವ ಪ್ರಾಯದವರನ್ನು ನೋಡಿಕೊಳ್ಳಲು ಮಾತಾ ಸೊಲ್ಯೂಶನ್ಸ್ ಏಜೆನ್ಸಿ ಮೂಲಕ ಕೊಣಾಜೆ ಕಕ್ಕೆಮಜಲಿನ ನಿವಾಸಿಗಳು ಯುವತಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದು, ಪ್ರತೀ ತಿಂಗಳು ರೂ. 20,000ವನ್ನು ಏಜೆನ್ಸಿಗೆ ಪಾವತಿಸುತ್ತಿದ್ದರು.
ಪೂಜಾ ಫೆಬ್ರವರಿ 1ರಂದು 3 ಗಂಟೆಗೆ ಮನೆಯಿಂದ ಹೋದವಳು ವಾಪಾಸ್ ಬಂದಿಲ್ಲ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.