ಮೂಡುಬಿದಿರೆ: ಫಲ್ಗುಣಿ ನದಿಗೆ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆಬ್ರವರಿ 2ರಂದು ಸಂಜೆ ನಡೆದಿದೆ.
ಮೃತ ಯುವಕನನ್ನು ಮಳಲಿ ಮಟ್ಟಿ ತಿಮ್ಮೊಟ್ಟು ನಿವಾಸಿ ಚೇತನ್ ಪೂಜಾರಿ (28) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಈತ ತನ್ನ ಸ್ಕೂಟರನ್ನು ಗುರುಪುರ ಸೇತುವೆಯ ಮೇಲೆ ಪಾರ್ಕ್ ಮಾಡಿದ್ದ.
ಸ್ಕೂಟರ್ ನೋಡಿದ ಸ್ಥಳೀಯರು ಶುಕ್ರವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.