ಮಾಡುಬಿದಿರೆ: ಹಿರಿಯ ಕೃಷಿಕ ಮಾರ್ಪಾಡಿ ಗ್ರಾಮದ ನಾರಂಪಾಡಿಗುತ್ತು ಧರ್ಣಪ್ಪ ಹೆಗ್ಡೆ (87) ಭಾನುವಾರ ಬೆಳಿಗ್ಗೆ ನಿಧನರಾದರು.
ಕಂಬಳ ಅಭಿಮಾನಿಯಾಗಿದ್ದ ಅವರು ತಮ್ಮ ಮನೆಯ ಕಂಬಳ ಗದ್ದೆಯಲ್ಲಿ ಉಳುಮೆ ಮುಗಿದ ಬಳಿಕ ಊರಿನ ಕೋಣಗಳನ್ನು ತರಿಸಿ ಹಲವು ವರ್ಷ ಸಾಂಪ್ರದಾಯಿಕ ದೈವದ ಕಂಬಳ ಆಯೋಜಿಸಿಕೊಂಡು ಬಂದಿದ್ದರು.
ಕೋಟೆಬಾಗಿಲು ಶ್ರೀ ಮಹಮ್ಮಾಯಿ ಸೇವಾ ಸಮಿತಿಯ ಹಿರಿಯ ಸದಸ್ಯರಾಗಿದ್ದರು. ಅವರಿಗೆ ಪತ್ನಿ ಇಬ್ಬರು ಗಂಡು ನಾಲ್ವರು ಹೆಣ್ಣು ಮಕ್ಕಳಿದ್ದಾರೆ.
Tags
Obituary