ರೋನ್ಸ್ ಬಂಟ್ವಾಳ
ಮುಂಬಯಿ: ಮಂಗಳೂರಿನ ಯುವ ಗಾಯಕಿ ಕು| ರಿಷಲ್ ಮೆಲ್ಬಾ ಕ್ರಾಸ್ತ ಈಕೆ ಇತ್ತೀಚೆಗೆ ಗೋಪಾಲನ್ ಮಾಲ್ ಬೆಂಗಳೂರು ಇವರು ಆಯೋಜಿಸಿದ್ದ ಸೂಪರ್ ಸಿಂಗರ್ 5ರ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಝೀ ಕನ್ನಡ ಜ್ಯೂರಿಗಳ ಹಾಗೂ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ರಿಷಲ್ ಪ್ರಶಸ್ತಿಪತ್ರ, ಒಂದು ಲಕ್ಷ ನಗದು ಬಹುಮಾನ ಹಾಗೂ ಇನ್ನಿತರ ಪುರಸ್ಕಾರ ಗೌರವಗಳೊಂದಿಗೆ ಸನ್ಮಾನಿಸಲ್ಪಟ್ಟಿದ್ದಾರೆ.
ಮಂಗಳೂರು ಇಲ್ಲಿನ ಪ್ರಖ್ಯಾತ ಗಾಯಕ ರೋನಿ ಕ್ರಾಸ್ತ ಇವರ ಸುಪುತ್ರಿ ರಿಷಲ್ ಪ್ರಸ್ತುತ ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಈಕೆ ಮಂಗಳೂರಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಈಕೆ ಜಾಗತಿಕ ಸಂಗೀತ ಕ್ಷೇತ್ರದ ಮಿನುಗುತಾರೆಯಾಗಿ ಪ್ರಜ್ವಲಿಸಲಿ ಎಂದು ಹಾರೈಸುತ್ತೇವೆ.