ಮುಂಬಯಿ : ಉಪನಗರ ಅಂಧೇರಿ ಪೂರ್ವದ ಚಕಾಲ ಫಿಶ್ ಮಾರ್ಕೆಟ್ ಸನಿಹದ ಜೆ.ವಿ ಚಾಳ್ ನಿವಾಸಿ ವಿಲ್ಮಾ ವಿನ್ಸೆಂಟ್ ಕ್ವಾಡ್ರಸ್ (53.) ಇಂದಿಲ್ಲಿ (ಫೆ.07) ಶುಕ್ರವಾರ ಅಂಧೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಐದು ದಿನಗಳ ಹಿಂದೆಯಷ್ಟೇ ಏಕಾಏಕಿ ಮೆದುಳಿನ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಅವರು, ಮೂಲತಃ ಉಡುಪಿ ತಾಲೂಕಿನ ಬೆಳ್ಮಣ್ಣಿನ ಕ್ರೈಸ್ಟ್ ಕಿಂಗ್ ವಾರ್ಡ್ ನಿವಾಸಿಯಾಗಿದ್ದರು. ಮುಂಬಯಿಯಲ್ಲಿ ಹಲವು ವರ್ಷಗಳಿಂದ ಬ್ಯೂಟಿಷಿಯನ್ ಆಗಿದ್ದ ಮೃತರು ತಾಯಿ, ಪತಿ, ಮೂರು ಸುಪುತ್ರಿಯರು, ಓರ್ವ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Tags
Obituary