![]() |
ಸಂತೋಷ್ ನಾಯ್ಕ್ ಯಾನೆ ಅಟ್ಟೆ ಸಂತು |
ಮೂಡುಬಿದಿರೆ: ಇಲ್ಲಿನ ಇರುವೈಲು ಗ್ರಾಮದ ಸುನ್ನೋಣಿಯಲ್ಲಿ ಕೋಳಿ ಅಂಕ ನಡೆಸಲು ಸಿದ್ಧತೆ ನಡೆಸುತ್ತಿದ್ದ ಸಂತೋಷ್ ನಾಯ್ಕ್ ಯಾನೆ ಅಟ್ಟೆ ಸಂತು, ವೇದವ್ ಯಾನೆ ಚಿಮಣಿ ಸಂತು, ಕಿಶೋರ್, ಪೂವಪ್ಪ ಪೂಜಾರಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋಹನ್ ಕುತ್ಯಾಡಿ, ಮಹಾಬಲ ಪೂಜಾರಿ, ವಿಷ್ಣು ಪೂಪಾಡಿ, ಜಗ್ಗು ಕರ್ಪೆ, ಗುಮ್ಮಣ್ಣ, ಮನೋಜ್ ಕುಮಾರ್, ಹರೀಶ್ ಮುಂತಾದವರು ಪೊಲೀಸರಿಂದ ತಪ್ಪಿಕೊಂಡು ಓಡಿರುವ ಬಗ್ಗೆ ವಶಕ್ಕೆ ಸಿಕ್ಕಿರುವ ಆರೋಪಿಗಳು ಮಾಹಿತಿ ನೀಡಿದ್ದಾರೆ.
ಸಂತೋಷ್ ಯಾನೆ ಅಟ್ಟೆ ಸಂತು ಅವರ ಮೇಲೆ ಈಗಾಗಲೇ 4 ಕೋಳಿ ಅಂಕದ ಪ್ರಕರಣಗಳಿದ್ದು ಈತನ ಮೇಲೆ ಬಿಎನ್‌ಎಸ್ ಕಲಂ 112 ಸಂಘಟಿತ ಅಪರಾಧ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ. ಆರೋಪಿಗಳಿಂದ 4 ಹುಂಜ, 1 ಸಾವಿರ ರೂಪಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೂಡುಬಿದಿರೆ ಠಾಣಾ ನಿರೀಕ್ಷಕರಾದ ಸಂದೇಶ್ ಪಿಜಿ ಅವರ ನೇತೃತ್ವದಲ್ಲಿ ಸಿಬ್ಬಂಧಿಗಳಾದ ರಾಜೇಶ, ಪ್ರದೀಪ್, ಸುರೇಶ್, ವೆಂಕಟೇಶ, ಚಂದ್ರಶೇಖರ, ಉಮೇಶ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.