ಮೂಡುಬಿದಿರೆ: ನಿಡ್ಡೋಡಿಯಲ್ಲಿ ಗಣಿಗಾರಿಕೆಗೆ ಪರವಾನಿಗೆ ಕೊಟ್ಟದ್ದೇ ಬಿಜೆಪಿ ಸರಕಾರ. ಖಾಸಗಿ ಕಂಪೆನಿಯೊAದು ನಡೆಸುತ್ತಿರುವ ಗಣಿಗಾರಿಕೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ ಪಾಲುದಾರರಾಗಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದರು.
ಸಮಿತ್‌ರಾಜ್ ಪ್ರಕರಣವನ್ನು ಮರೆಮಾಚಿಸಲು, ದಿಕ್ಕುತಪ್ಪಿಸಲು ಶಾಸಕರು ಹಾಗೂ ಬಿಜೆಪಿಯವರು ಇಷ್ಟು ದಿನ ಇಲ್ಲದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಮಿಥುನ್ ರೈ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಪುರಂದರ ದೇವಾಡಿಗ, ರುಕ್ಕಯ್ಯ ಪೂಜಾರಿ, ಸುರೇಶ್ ಕೋಟ್ಯಾನ್, ಹರ್ಷವರ್ಧನ ಪಡಿವಾಳ್, ಪ್ರವೀಣ್ ಕುಮಾರ್, ಜೊಸ್ಸಿ ಮಿನೇಜಸ್, ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ, ಸುರೇಶ್ ಪ್ರಭು, ಸತೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.