ಸಂಪಿಗೆಯಲ್ಲಿ ಬೈಕ್‌ಗೆ ಬಿದ್ದ ವಿದ್ಯುತ್ ಕಂಬ: ಪವಾಡ ಸದೃಶ ಪಾರಾದ ಸವಾರ


ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ಶನಿವಾರ ಮಧ್ಯಾಹ್ನ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದಿದ್ದು, ಸವಾರ ಪವಾಡ ಸದೃಶ್ಯ ಪಾರಾಗಿದ್ದಾರೆ.

ನಿಡ್ಡೋಡಿ ನಿವಾಸಿ ವಿನೋದ್ ನಿಡ್ಡೋಡಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ, ಸಂಪಿಗೆ ಎಚ್.ಪಿ ಪೆಟ್ರೋಲ್‌ಬಂಕ್ ಬಳಿ ವಿದ್ಯುತ್ ಕಂಬ ಧರೆಗುರುಳಿದು ಬೈಕ್ ಮೇಲೆ ಬಿದ್ದಿದೆ. ಬೈಕ್‌ನ ಮಧ್ಯಭಾಗ ಜಖಂಗೊಂಡಿದೆ. ಸವಾರ ವಿನೋದ್ ಅವರ ಕಾಲಿಗೆ ಗಾಯವಾಗಿದ್ದು, ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



Previous Post Next Post

Contact Form