ಮೂಡುಬಿದಿರೆ: ಬೆಳುವಾಯಿ ಪೇಟೆ ಬಳಿ ಕಾಮಗಾರಿ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಾಯಂಕಾಲ ಕಾರು ಪಲ್ಟಿ ಹೊಡೆದು ಡಿವೈಡರ್‌ಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಕಾರು 3 ಪಲ್ಟಿಯಾಗಿದ್ದು, ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಂಗಳೂರಿನ ಹೋಟೆಲೊಂದರ ಕಾರ್ಮಿಕ, ವೇಣೂರು ಪೆರ್ಮುಡೆ ನಿವಾಸಿ ಸುಮಿತ್(26) ಮೃತಪಟ್ಟವರು. ಜೊತೆಗಿದ್ದ ದೀಕ್ಷಿತ್, ಸಂದೀಪ್, ಅನಿಶ್ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ. ಬೆಳುವಾಯಿ ಫ್ಲೈಓವರ್‌ನಲ್ಲಿ ಕಾರು ಪಲ್ಟಿಯಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಹಿಂದಿನ ಚಕ್ರ ಎಸೆಯಲ್ಪಟ್ಟಿತ್ತು.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಪೆ: ಯಶೋಧರ ಬಂಗೇರಾ