ಮೂಡುಬಿದಿರೆ: ಇಲ್ಲಿನ ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ನೂತನ ಲಾಂಛನ ಬಿಡುಗಡೆ ಕಾರ್ಯಕ್ರಮ ಶ್ರೀ ಗೌರಿ ದೇವಸ್ಥಾನದಲ್ಲಿ ನೆರವೇರಿತು.
ದ.ಕ. ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮೂಡುಬಿದರೆ ಇವರು ನೂತನ ಲಾಂಛನವನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಸುದರ್ಶನ ಎಂ ಅವರು, ನೂರಾರು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಚಂದ್ರಶೇಖರ ದೇವರ ಪುಷ್ಕರಿಣಿಯ ಮರು ನಿರ್ಮಾಣ ಕಾರ್ಯದಲ್ಲಿ ದೊಡ್ಮನೆ ಫ್ರೆಂಡ್ಸ್ ತಂಡದ ಕಾರ್ಯ, ದೇವಸ್ಥಾನಗಳ ಮಹೋತ್ಸವ ಸಂದರ್ಭದಲ್ಲಿ ತಂಡದ ಸೇವೆ ಹಾಗೂ 9 ವರ್ಷಗಳಿಂದ ತಂಡದ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಗೌರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ರಾಜೇಶ್ ಭಟ್, ಬೆದ್ರ ಫ್ರೆಂಡ್ಸ್ ಇವರ ಪ್ರಜ್ವಲ್ ಕುಲಾಲ್, ಸರ್ವೋದಯ ಫ್ರೆಂಡ್ಸ್ ವತಿಯಿಂದ ಪ್ರಕಾಶ್ ಕುಂದರ್, ಪವರ್ ಫ್ರೆಂಡ್ಸ್ ವತಿಯಿಂದ ಸುಧಾಕರ್ ಶೆಟ್ಟಿ ಹಾಗೂ ದೊಡ್ಮನೆ ಫ್ರೆಂಡ್ಸ್ ತಂಡದ ಹಿರಿಯರಾದ ಓಮಯ್ಯ ಪೂಜಾರಿ ಉಪಸ್ಥಿತರಿದ್ದರು.
ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.


