ಅಮರನಾಥ ಶೆಟ್ಟಿ ಚಾರಿಟೇಬಲ್‌ ಟ್ರಸ್ಟಿನಿಂದ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ




ಮೂಡುಬಿದಿರೆ: ಗ್ರಾಮೀಣ ಪ್ರದೇಶದಲ್ಲಿ ಅಂಗವನಾಡಿ ಮತ್ತು ಆಶಾ ಕಾಯಕರ್ತೆಯರ ಕೊಡುಗೆ ಬಹಳ ಇದೆ. ಕೋವಿಡ್‌ ಸಂದರ್ಭದಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಎಲ್ಲರ ಸಹಾಯಕ್ಕೂ ಧಾವಿಸಿ ಬರುವ ಈ ಅಕ್ಕಂದಿರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪರರಿಗಾಗಿ ಕೆಲಸಮಾಡುವುದನ್ನು ನಾವು ಕಂಡಿದ್ದೇವೆ.

ಇಂತಹ ಕಾರ್ಯಕರ್ತರಿಗಾಗಿ ಅಮರನಾಥ ಶೆಟ್ಟಿ ಚಾರಿಟೇಬಲ್‌ ಟ್ರಸ್ಟಿನಿಂದ ಆಗಸ್ಟ್‌ 24ರಂದು ರವಿವಾರ ಬೆಳಗ್ಗೆ 9:45ರಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ಉಚಿತ ಕ್ಯಾನ್ಸರ್‌ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ 250ಕ್ಕೂ ಹೆಚ್ಚು ಕಾರ್ಯಕರ್ತೆಯರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದುಮ ನಿಟ್ಟೆ ಡೀಮ್ಸ್‌ ಯುನಿವರ್ಸಿಟಿಯ ಡಾ. ಎಂ. ಶಾಂತಾರಾಮ್‌ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕರಾದ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಡಾ| ಎಂ. ಮೋಹನ ಆಳ್ವ, ಪದ್ಮರಾಜ್‌ ರಾಮಯ್ಯ, ಚೌಟರ ಅರಮನೆಯ ಕುಲದೀಪ್‌, ಅದಾನಿ ಗ್ರೂಪಿನ ಕಿಶೋರ್‌ ಆಳ್ವ, ಉದ್ಯಮಿ ಶ್ರೀಪತಿ ಭಟ್‌, ಲಕ್ಷ್ಮೀ ಮೆಮೋರಿಯಲ್‌ ಟ್ರಸ್ಟಿನ ಪ್ರಶಾಂತ್‌ ಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿ, ಎ.ಜೆ. ಆಸ್ಪತ್ರೆಗಳ ಸಹಯೋಗದಲ್ಲಿ ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಜಯಶ್ರೀ ಅಮರನಾಥ್‌ ಶೆಟ್ಟಿ, ಡಾ| ಅಮರಶ್ರೀ ಅಮರನಾಥ್‌ ಶೆಟ್ಟಿ ಮತ್ತು ಅಶ್ರಿತಾ ಪ್ರಶಾಂತ್‌ ಶೆಟ್ಟಿ ಈ ಅತ್ಯುತ್ತಮ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.

ಅವರಿಗೆ ಶುಭವಾಗಲಿ.

ಇದನ್ನೂ ಓದಿ: ಅಮರನಾಥ ಶೆಟ್ಟರ ಜೀವನ...

Previous Post Next Post

Contact Form