ಸರ್ವೋದಯ ಫ್ರೆಂಡ್ಸ್ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೋಶೋತ್ಸವದ ಪ್ರಯುಕ್ತ, ಸರ್ವೋಯದ ಫ್ರೆಂಡ್ಸ್ ಬೆದ್ರ (ರಿ) ಇದರ 17ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಮಾಜ ಮಂದಿರದಲ್ಲಿ‌ ನಡೆಯಿತು.

ಆಮಂತ್ರಣ ಪತ್ರಿಕೆ ಉದ್ಘಾಟಿಸಿ ಮಾತನಾಡಿದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಅವರು 'ಗಣೇಶೋತ್ಸವದ ಹೆಸರಿನಲ್ಲಿ ಮೂಡುಬಿದಿರೆಯ ಯುವಜನರು ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಭವಿಷ್ಯದಲ್ಲಿ ಗಣೇಶೋತ್ಸವದ ಮುಂದಾಳುತ್ವ ವಹಿಸಬೇಕಾದ ಯುವಜನರು ಸಮಾಜಮುಖಿ ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಆಧ್ಯಾತ್ಮಿಕ ಚಿಂತನೆಗೂ ಒತ್ತು ಕೊಡುತ್ತಿರುವುದು ಅಭಿನಂದನೀಯ' ಎಂದರು.

ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸರ್ವೋದಯ ಫ್ರೆಂಡ್ಸ್ ಇದರ ಗೌರವಾಧ್ಯಕ್ಷ ರಂಜಿತ್ ಪೂಜಾರಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಗೌತಮ್‌, ವಕೀಲೆ ಸುಚಿತಾ, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಗುರು ಒಂಟಿಕಟ್ಟೆ ಉಪಸ್ಥಿತರಿದ್ದರು.

ಅಕ್ಷಯ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯವರ್ಮ ಜೈನ್ ವಂದಿಸಿದರು.

Previous Post Next Post

Contact Form