ಮೂಡುಬಿದಿರೆ: ಸುಮಾರು 3 ಲಕ್ಷ ಮೌಲ್ಯದ ಚಿನ್ನ, 2 ಲಕ್ಷ ನಗದು ಹಣವನ್ನು ಆಟೋ ಚಾಲಕನೋರ್ವ ವಾಪಾಸ್ ನೀಡದೆ ಇರುವುದರಿಂದ ಮನನೊಂದು ಇಲ್ಲಿನ ತೋಡಾರಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೋಡಾರು ಗ್ರಾಮದ ನವಾಜ್ ಎಂಬವರ ಪತ್ನಿ ಶಫ್ರೀನಾ ಬಾನು(31) ಆತ್ಮಹತ್ಯೆ ಮಾಡಿಕೊಂಡವರು. ಈಕೆ ಆರೋಪಿ ಪುತ್ತಿಗೆ ಗ್ರಾಮದ ಅಶ್ರಫ್ ಎಂಬಾತನಿಗೆ 7 ತಿಂಗಳ ಹಿಂದೆ ರೂ 2 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನ ನೀಡಿದ್ದರು.
ಇದನ್ನು ಹಿಂದೆ ಕೇಳುವಾಗ, ಆರೋಪಿಯು ನಿರಾಕರಿಸುವುದರಿಂದ ನೊಂದ ಶಫ್ರೀನ್ ಮನೆಯ
ಕೋಣೆಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
x
