ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟ್ಟೆಯ ಕಾಡು ಪ್ರದೇಶದಲ್ಲಿ ಹಸುವನ್ನು ಕಡಿಯುತ್ತಿದ್ದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ದಾಳಿ ಮಾಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿಗಳನ್ನು ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್ ಹಾಗೂ ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಗಂಟಾಲ್ಕಟ್ಟೆಯ ಜಲೀಲ್ ಎಂಬವರ ಮನೆಯ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ದಾಳಿ ಮಾಡಿದ ಪೊಲೀಸರು 50 ಕೆಜಿ ದನದ ಮಾಂಸ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದಿದ್ದು, ಮಾಂಸಕ್ಕೆAದು ತಂದಿದ್ದ 3 ದನಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದಾರೆ. ಮಾಂಸ ಪಡೆಯಲು ಬಂದಿದ್ದ 2 ಕಾರುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅಪರಾಧ ವಿಭಾಗದ ಸಿಬ್ಬಂಧಿüಗಳಾದ ಪಿ.ಎಸ್.ಐ ಕೃಷ್ಣಪ್ಪ, ಅಖಿಲ್ ಅಹಮ್ಮದ್, ನಾಗರಾಜ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳ ವಿರುದ್ಧ ಬಿ.ಎನ್.ಎಸ್. ಕಲಂ 303(2) ಮತ್ತು 4, 12 ಗೋಹತ್ಯೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
.jpg)
.jpg)