ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಸರ್ಕಾರ ಘೋಷಿಸಿದೆ. SSLC (10ನೇ ತರಗತಿ) ಹಾಗೂ PUC ವಿದ್ಯಾರ್ಥಿಗಳ ಪಾಸ್ ಮಾರ್ಕ್ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಿದರು.
ಹೊಸ ನಿಯಮಗಳ ಪ್ರಕಾರ SSLC ವಿದ್ಯಾರ್ಥಿಗಳಿಗೆ ಪಾಸ್ ಆಗಲು ಬೇಕಾದ ಕನಿಷ್ಠ ಅಂಕವನ್ನು 35%ರಿಂದ 33%ಕ್ಕೆ ಇಳಿಸಲಾಗಿದೆ. PUC ವಿದ್ಯಾರ್ಥಿಗಳಿಗೆ ಪಾಸ್ ಮಾರ್ಕ್ 30% ಆಗಿದೆ.
ಆಂತರಿಕ ಮೌಲ್ಯಮಾಪನದಲ್ಲಿ ಪೂರ್ಣ 20 ಅಂಕಗಳಲ್ಲಿ 20 ಅಂಕ ಗಳಿಸಿದ ವಿದ್ಯಾರ್ಥಿಗಳು, ಲಿಖಿತ ಪರೀಕ್ಷೆಯಲ್ಲಿ ಕೇವಲ 13% ಅಂಕ ಗಳಿಸಿದರೂ ಉತ್ತೀರ್ಣರಾಗುತ್ತಾರೆ.
ಈ ಹೊಸ ನೀತಿಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಪರೀಕ್ಷೆಯಲ್ಲಿ ಅಲ್ಪ ಅಂಕಗಳ ಕೊರತೆಯಿಂದ ತೇರ್ಗಡೆ ಆಗದೆ ಉಳಿಯುವ ವಿದ್ಯಾರ್ಥಿಗಳಿಗೆ ಇದು ಒಂದು ದೊಡ್ಡ ಸಹಾಯವಾಗಲಿದೆ.
ಸಂಪಾದಕರ ಷರಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತೇರ್ಗಡೆ ಅಂಕ ಇಳಿಸುವುದರಿಂದ ಸಮಾಜಕ್ಕೆ ಮತ್ತು ದೇಶಕ್ಕೆ ಆಗುವ ಪ್ರಯೋಜನ ಏನು?
