ಮೂಡುಬಿದಿರೆ: ಇಂದು ಸಂಜೆ ಸುರಿದ ಮಳೆಗೆ ಇಲ್ಲಿನ ತಾಕೊಡೆ ಕ್ರಾಸ್ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದು ಮೂಡುಬಿದಿರೆಯಿಂದ ಬಂಟ್ವಾಳ ಕಡೆಗೆ ಹೋಗುವ ರಸ್ತೆ ತಾಸು ಬಂದ್ ಆಗಿತ್ತು.
ಮರ ಬಿದ್ದ ಪರಿಣಾಮ ಹಲವು ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ರಫೀಕ್, ರೋಶನ್ ಮುಂತಾದ ಸ್ಥಳೀಯರು ಜೆಸಿಬಿ ಮತ್ತು ಇತರ ಯಂತ್ರಗಳ ಸಹಾಯದಿಂದ ಮರ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸಿದ್ದಾರೆ.
Tags
Taccode
