ಮೂಡುಬಿದಿರೆ: ಹಲವಾರು ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟ ಸಮಾಜ ಸೇವಕ, ಅಂಬುಲೆನ್ಸ್ ಚಾಲಕ, ಖ್ಯಾತ ದೇಹಧಾರ್ಡ್ಯ ಪಟು, ಗಂಟಾಲ್ಕಟ್ಟೆಯ ಅನಿಲ್ ಮೆಂಡೋನ್ಸಾ ಅವರಿಗೆ ಕರ್ನಾಟಕ ಮಾಣಿಕ್ಯ ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಪುರಭವನದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
