ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ಮೂಡುಬಿದಿರೆಯ ವಕೀಲ ಮರ್ವಿನ್ ಜಾನ್ಸನ್ ಲೋಬೊ ಅವರು ನೇಮಕವಾಗಿದ್ದಾರೆ.
ಮರ್ವಿನ್ ಜಾನ್ಸನ್ ಲೋಬೊ ಅವರು ವಕೀಲ ವೃತ್ತಿಯ ಜೊತೆಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದು, ಶೈಕ್ಷಣಿಕ ದೆಸೆಯಲ್ಲಿ ಎನ್‌ಎಸ್‌ಯುಐ ಶ್ರೀ ಮಹಾವೀರ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಮೂಡುಬಿದಿರೆ ವಲಯ ಭಾರತೀಯ ಕಥೋಲಿಕ್ ಯುವ ಸಂಚಲನದ ಅಧ್ಯಕ್ಷರಾಗಿಯೂ, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯೊಂದಿಗೆ, ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ ಅವರು ಆದೇಶದಂತೆ ಈ ನೇಮಕಾತಿ ಮಾಡಲಾಗಿದೆ.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಘಟಕದ ಉಪಾಧ್ಯಕ್ಷರಾಗಿ ವೀಣಾ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಕುಮಾರ್, ಕಾರ್ಯದರ್ಶಿಯಾಗಿ ಇರ್ಷಾದ್ ಎನ್.ಇ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಡಿಸೋಜಾ, ಖಜಾಂಚಿಯಾಗಿ ಅಮರೇಂದ್ರ ಎಚ್., ಕಾರ್ಯಕಾರಿ ಸದಸ್ಯರಾಗಿ ಹರೀಶ್ ಪಿ, ರಾಜೇಶ್ ಸುವರ್ಣ, ಪದ್ಮಪ್ರಸಾದ್, ವಿಜೇತಾ ಪಿಂಕಿ ಡೇಸಾ, ಜ್ಯೋತಿ, ಶ್ವೇತಾ, ನಿಖಿತಾ ರೆಬೆಲ್ಲೊ, ಮ್ಯಾಥ್ಯು ಮಸ್ಕರೇನಸ್, ಅಭಿನಂದನ್ ಬಲ್ಲಾಳ್, ಪ್ರಜ್ವಲ್ ಡಿಸೋಜಾ ನೇಮಕವಾಗಿದ್ದಾರೆ.
