ಮೂಡುಬಿದಿರೆ: ಭಾನುವಾರ ಕಾಣೆಯಾಗಿದ್ದ ಬಾಲಕನ ಶವ ಪೆರ್ಡೂರು ಸಮೀಪದ ಹೋಳೆಬಾಗಿಲು ನದಿಯಲ್ಲಿ ಪತ್ತೆಯಾಗಿದೆ. ಮೃತ ಬಾಲಕನನ್ನು ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶ್ರೀಶಾನ್ ಭಾನುವಾರ ತನ್ನ ಸ್ನೇಹಿತನೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದನು. ಸ್ನಾನದ ವೇಳೆ ಅವನು ನೀರಿನಲ್ಲಿ ಮುಳುಗಿದ್ದು, ಆ ಸಂದರ್ಭದಲ್ಲಿ ಅವನ ಸ್ನೇಹಿತ ಭಯದಿಂದ ಘಟನೆ ಕುರಿತು ಯಾರಿಗೂ ಹೇಳಿರಲಿಲ್ಲ.
ಕುಟುಂಬದವರು ಇಡೀ ರಾತ್ರಿ ಹುಡುಕಾಟ ನಡೆಸಿದರೂ ಬಾಲಕನ ಪತ್ತೆಯಾಗಲಿಲ್ಲ. ಬಳಿಕ ಸ್ನೇಹಿತನನ್ನು ವಿಚಾರಿಸಿದಾಗ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ದೊರಕಿತು.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
Crime
