₹53 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಕಳ್ಳಸಾಗಣೆ ಪತ್ತೆ


ಮೂಡುಬಿದಿರೆ: ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 18 ದಿನಗಳಲ್ಲಿ ₹53 ಕೋಟಿಗೂ ಹೆಚ್ಚು ಮೌಲ್ಯದ 72 ಕಿಲೋಗ್ರಾಂ ಹೈಡ್ರೋಪೊನಿಕ್ ಗಾಂಜಾ ಕಳ್ಳಸಾಗಣೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಬಹುತೇಕ ಪ್ರಕರಣಗಳು ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರ ಬಳಿ ಪತ್ತೆಯಾಗಿದ್ದು, ಬೆಂಗಳೂರು ಮಾರ್ಗವಾಗಿ ಉನ್ನತ ಪ್ರಮಾಣದ ಗಾಂಜಾಕಳ್ಳಸಾಗಣೆ ಪ್ರಯತ್ನಗಳು ಹೆಚ್ಚುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ನವೆಂಬರ್ 12: ಇಬ್ಬರು ಪ್ರಯಾಣಿಕರ ಬಳಿ 15.79 ಕೆ.ಜಿ. ಹೈಡ್ರೋ ಗಾಂಜಾ ವಶ — ಮೌಲ್ಯ ₹5.53 ಕೋಟಿ. NDPS ಕಾಯ್ದೆ ಅಡಿಯಲ್ಲಿ ಇಬ್ಬರ ಬಂಧನ

ನವೆಂಬರ್ 11: 2.760 ಕೆ.ಜಿ. ಗಾಂಜಾ ವಶ — ಮೌಲ್ಯ ₹96.60 ಲಕ್ಷ.

ನವೆಂಬರ್ 10: ಒಬ್ಬ ಪ್ರಯಾಣಿಕನ ಬಳಿ 6.77 ಕೆ.ಜಿ. — ಮೌಲ್ಯ ₹2.37 ಕೋಟಿ — ಬಂಧನ.

ನವೆಂಬರ್ 9: ಬ್ಯಾಂಕಾಕ್‌ನಿಂದ ಬಂದ ಮತ್ತೊಬ್ಬ ಪ್ರಯಾಣಿಕನ ಬಳಿ 2.990 ಕೆ.ಜಿ. ಗಾಂಜಾ — ಮೌಲ್ಯ ₹1.04 ಕೋಟಿ.

ನವೆಂಬರ್ 5: 3.320 ಕೆ.ಜಿ. ವಶ — ಮೌಲ್ಯ ₹3.32 ಕೋಟಿ.

ನವೆಂಬರ್ 1: 3.18 ಕೆ.ಜಿ. ಪತ್ತೆ — ಚೆಕ್-ಇನ್ ಲಗೇಜ್‌ನಲ್ಲಿ ಮರೆಮಾಡಲಾಗಿತ್ತು.

ಅಕ್ಟೋಬರ್ 29:  Air Intelligence Unit (AIU) ಅಧಿಕಾರಿಗಳು ದುಬೈ ಮೂಲಕಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬಳಿ 37.88 ಕೆ.ಜಿ. ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ — ಮೌಲ್ಯ ₹37.88 ಕೋಟಿ.

ಎಲ್ಲಾ ಪ್ರಯಾಣಿಕರನ್ನು ವಿಚಾರಣೆ ಮಾಡಲಾಗಿದ್ದು, ಈ ಪ್ರಕರಣಗಳು ದೊಡ್ಡ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿರುವುದೇ ಎಂಬುದನ್ನು ಪರಿಶೀಲಿಸಲು ತನಿಖೆ ಮುಂದುವರಿಸಲಾಗಿದೆ.

Previous Post Next Post

Contact Form