ಮಂಗಳೂರು: ಯುವ ಉದ್ಯಮಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮ ‘ಉದ್ಯಮ್ ಸಂಗಾತಿ’ ಯುವ ಉದ್ಯಮಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಜ್ಞಾನ, ಸಂವಾದ ಮತ್ತು ಪ್ರೇರಣೆಯಿಂದ ಸಮೃದ್ಧವಾದ ವೇದಿಕೆಯಾಗಿತ್ತು. ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹಾಗೂ ಉದ್ಯಮಿ ಮೈಕೆಲ್ ಡಿಸೋಜಾ ಇವರಿಗೆ ಗೌರವ ಸಮರ್ಪಣೆ ನಡೆಯಿತು.
ಈ ಸಂದಭ ದಲ್ಲಿಮಾತನಾಡಿದ ಮೈಕೆಲ್ ಡಿಸೋಜಾ ನಗದು ಬಂಡವಾಳ ನಿರ್ಮಾಣ, ಹಣದ ಮೌಲ್ಯ ಅರಿವು ಮತ್ತು ವ್ಯವಹಾರ ಆರಂಭಿಸುವ ಮೊದಲು ತಿಳಿವಳಿಕೆಯನ್ನು ಪಡೆಯುವ ಮಹತ್ವದ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು. ಮಾಹಿತಿ ಹೊಂದಿದ ಗ್ರಾಹಕರೊಂದಿಗೆ ಕೆಲಸ ಮಾಡುವ ಸವಾಲುಗಳು ಹಾಗೂ ವ್ಯವಹಾರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಿಗುವ ತೃಪ್ತಿಯ ಬಗ್ಗೆ ಮಾತನಾಡಿದರು. ಷೇರು ಹೂಡಿಕೆ, "ರೂಲ್ ಆಫ್ 72" ಕುರಿತ ತಿಳುವಳಿಕೆ ನೀಡಿ, “ಚಿಕ್ಕದಾಗಿ ಆರಂಭಿಸಿ, ಈಗಲೇ ಆರಂಭಿಸಿ” ಎಂದು ಯುವಕರಿಗೆ ಪ್ರೇರಣೆ ನೀಡಿದರು. ಜೊತೆಗೆ ಐಸಿವೈಎಂ ಶಕ್ತಿಯುತವಾದ ನೆಟ್ವರ್ಕಿಂಗ್ ವೇದಿಕೆ ಎಂದು ಶ್ಲಾಘಿಸಿದರು.
ವಕೀಲ, ಸಲಹೆಗಾರ, ಸಿಎ, ಮತ್ತು ಪ್ರಾಧ್ಯಾಪಕ ಲೈನಲ್ ಅರಾನ್ಹಾ ಅವರು ನೈತಿಕ ಮತ್ತು ಶಾಶ್ವತ ವ್ಯವಹಾರ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಗಟ್ಟಿಯಾದ ವ್ಯವಹಾರ ಮಾದರಿಗಳು, ಆರ್ಥಿಕ ಶಿಸ್ತು, ಲಾಭದಾರಿತ್ವ ಮತ್ತು ನಗದು ಪ್ರವಾಹದ ವ್ಯತ್ಯಾಸಗಳ ಅರಿವು ಹೀಗೆ ಹಲವು ಪ್ರಮುಖ ಅಂಶಗಳನ್ನು ಒತ್ತಿ ಹೇಳಿದರು.
ಬರಹದ ಒಪ್ಪಂದಗಳ ಅಗತ್ಯ, ವರ್ಕಿಂಗ್ ಕ್ಯಾಪಿಟಲ್ ವೆಚ್ಚಗಳು ಮತ್ತು ವ್ಯವಹಾರ ನೈತಿಕತೆ ಕುರಿತು ವಿವರಣೆ ನೀಡಿದ ಅವರು, ಸಮುದಾಯ ಮೌಲ್ಯಗಳನ್ನು ಪಾಲಿಸುತ್ತಲೇ ನೆಲದೊರಗಿರಲು ಯುವಕರನ್ನು ಪ್ರೋತ್ಸಾಹಿಸಿದರು. ವಿಫಲತೆಯನ್ನು ಎದುರಿಸುವುದು, ವ್ಯವಹಾರ ಕಲ್ಪನೆ ಆಯ್ಕೆ ಮಾಡುವುದು, ಪಾಲಕರ ನಿರೀಕ್ಷೆಗಳನ್ನು ನಿಭಾಯಿಸುವುದು ಇತ್ಯಾದಿ ವಿಷಯಗಳಲ್ಲಿಯೂ ಸಲಹೆಗಳನ್ನು ನೀಡಿದರು.
ಉತ್ಸಾಹಭರಿತ ಪ್ರಶ್ನೋತ್ತರ ಅಧಿವೇಶನದಲ್ಲಿ ವ್ಯವಹಾರದಲ್ಲಿ ಶಾರ್ಟ್ಕಟ್ಗಳ ಅಪಾಯ, ನಷ್ಟ ಕಡಿತಗೊಳಿಸುವ ಸಮಯ, ದೀರ್ಘಾವಧಿ ಗುರಿಗಳೊಂದಿಗೆ ಹೊಂದಿಕೊಂಡು ಸಾಗುವಿಕೆ ಕುರಿತು ಚರ್ಚೆ ನಡೆಯಿತು. "ಕಾಫಿ ಕ್ಯಾಂ ಇನ್ವೆಸ್ಟಿಂಗ್", ತಂಡ ನಿರ್ಮಾಣ, ಆರಂಭಿಕ ಲಾಭದಾರಿತ್ವ ಮುಂತಾದ ವಿಷಯಗಳನ್ನೂ ಚರ್ಚಿಸಲಾಯಿತು. ಸ್ಪೀಕರು “30 ದಿನಗಳ ಟೆಸ್ಟ್” ಪರಿಚಯಿಸಿ, ನಿರಂತರತೆ ಯುವ ಉದ್ಯಮಿಯ ಪ್ರಮುಖ ಗುಣ ಎಂದು ತಿಳಿಸಿದರು.
ಅಂತಿಮ ಅಧಿವೇಶನದಲ್ಲಿ ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಕಾರ್ಯದರ್ಶಿ ಹಾಗೂ ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ಫಾ. ಅಶ್ವಿನ್ ಲೊಹಿತ್ ಕಾರ್ಡೋಜಾ, ಸಮುದಾಯ ಅಭಿವೃದ್ಧಿಗೆ ಯುವಕರು ಕೈಗೊಂಡಿರುವ ಯೋಜನೆಗಳ ಬಗ್ಗೆ ಪ್ರಶಂಸಿಸಿದರು.
ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜಾ ಯುವ ಸಂಪರ್ಕ್, Wowr, ರೆಡ್ ಡ್ರಾಪ್ ಮಂಗಳೂರು ಮುಂತಾದ ಕಾರ್ಯಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಉದ್ಯಮಿ ಪರೋಪಕಾರಿ ಮೈಕೆಲ್ ಡಿಸೋಜಾ, ರಚನಾ ಫೌಂಡೇಶನ್ ಅಧ್ಯಕ್ಷ ರೋಯ್ ಕ್ಯಾಸ್ಟೆಲಿನೊ, ಫಾ. ಅಶ್ವಿನ್ ಲೊಹಿತ್ ಕಾರ್ಡೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಮೈಕೆಲ್ ಡಿಸೋಜಾ ತಂಡದ ಸದಸ್ಯರು, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜಾ, ಕಾರ್ಯದರ್ಶಿ ಮೆರಿಯಾ ಡಿಸಿಲ್ವಾ ಹಾಗೂ ಉದ್ಯಮ್ ಸಂಗಾತಿ ಸಂಯೋಜಕ ಫ್ಲಾಯ್ಡ್ ಪಿಂಟೊ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಮಾಜಿ ಅಧ್ಯಕ್ಷ ವಿನ್ಸ್ಟನ್ ಸಿಕ್ವೇರಾ ನಿರೂಪಿಸಿದರು.
.jpg)
.jpg)
.jpg)
.jpg)
.jpg)
.jpg)
.jpg)
.jpg)