ಎನ್‌ಆರ್‌ಐ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ (97) ನಿಧನ


ಬೆಂಗಳೂರು/ಮಂಗಳೂರು, ನವೆಂಬರ್ 29: ಎನ್ಆರ್ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ (97) ನವೆಂಬರ್ 29ರಂದು ನಿಧನರಾದರು. 1929 ಜನವರಿ 20ರಂದು ಸಂತಾನ್ ಜೋಕಿಮ್ಪಿರೇರಾ ಮತ್ತು ಅಸ್ಸಿಸ್ ಪಿರೇರಾ ದಂಪತಿಗಳಿಗೆ ಜನಿಸಿದ ಅವರು, ಸಹಾನುಭೂತಿ, ಭಕ್ತಿ ಮತ್ತು ಕರುಣೆಗಳಿಂದ ಕೂಡಿದ ಜೀವನವನ್ನು ನಡೆಸಿದ್ದರು.

ಅವರು ತಮ್ಮ ಮಕ್ಕಳು — ಫ್ರೆಡ್ ಕೊಲಾಸೊ (ಪತ್ನಿ ಆಂಜೆಲಾ), ರೊನಾಲ್ಡ್ ಕೊಲಾಸೊ (ಪತ್ನಿ ಜೀನ್), ಜೋ ಕೊಲಾಸೊ (ಪತ್ನಿ ಆಶಾ), ದಿವಂಗತ ಜೆಸಿಂತಾ ರೊಸಾರಿಯೋ (ಪತಿ ಅಲ್ಫೋನ್ಸೊ) ಹಾಗೂ ಲವೀನಾ ಕ್ರಾಸ್ತಾ (ಪತಿ ಥಾಮಸ್) ಹಾಗೂ ಮೊಮ್ಮಕ್ಕಳಾದ ಶೆರಾನ್, ಪೆಟ್ಯುಲಾ, ನೈಜಲ್ (ಪತ್ನಿ ನಿಕಿತಾ), ರ‍್ಯಾಂಡಲ್ (ಪತ್ನಿ ಮುರಿಯಲ್), ನಿಕೀತಾ (ಪತಿ ಅಮನ್ ಮೋಹನ್), ನಿಹಾಲ್, ಕೆನೆತ್ (ಪತ್ನಿ ಜೆನ್ನಿಫರ್), ಕೆವಿನ್ (ಪತ್ನಿ ಭಾವಿನಿ), ಸ್ವಪ್ನಿಲ್ ಹಾಗೂ ಮೊಮ್ಮೊಮ್ಮಗಳು ಅಮೀಲಿಯಾ ಕೋಲಾಕೊ ಇವರನ್ನು ಅಗಲಿದ್ದಾರೆ.

ಆಲಿಸ್ ಕೊಲಾಸೊ ಅವರನ್ನು ಎಲ್ಲರೂ ಅವರ ಸರಳತೆ, ಧಾರ್ಮಿಕ ನಂಬಿಕೆ ಮತ್ತು ಕುಟುಂಬದ ಮೇಲಿನ ಅಪಾರ ಪ್ರೀತಿಗಾಗಿ ಗೌರವಿಸುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಡಾ. ಜಿ. ಪರಮೇಶ್ವರ, ವಿದ್ಯುತ್ ಸಚಿವ ಕೆ.ಜೆ. ಜಾರ್ಜ್, ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹಾಗೂ ಕರ್ನಾಟಕ ರಾಜ್ಯ ಅಲೈಡ್ ಅಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಅಲಿ ಅವರು ಆಲಿಸ್ ಕೊಲಾಸೊ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂತ್ಯಕ್ರಿಯೆ ಡಿಸೆಂಬರ್ 2, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬ್ರಿಗೇಡ್ ರೋಡ್‌ನ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ನೆರವೇರಲಿದೆ. ಅಂತ್ಯಸಂಸ್ಕಾರವು ಶಾಂತಿನಗರದ ಲಾಂಗ್‌ಫೋರ್ಡ್ ಟೌನ್‌ನ ಸೇಂಟ್ ಪ್ಯಾಟ್ರಿಕ್ ಚರ್ಚ್ ಸಮಾಧಿ ಭೂಮಿಯಲ್ಲಿ (ಗೇಟ್ ನಂ. 6) ನಡೆಯಲಿದೆ. ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೃತದೇಹಕ್ಕೆ ನಮನ ಸಲ್ಲಿಸಬಹುದು.

Previous Post Next Post

Contact Form