ಆಳ್ವಾಸ್ ಉಪನ್ಯಾಸಕಿ ರುಚಿಕಾ ರೋಶನ್‌ಗೆ ಡಾಕ್ಟರೇಟ್ ಪದವಿ


ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿಕಾ ರೋಶನ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ಆಳ್ವಾಸ್ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳ ಕಾಡು ಮಾವಿನ ಪ್ರಭೇದಗಳ ಆನುವಂಶಿಕ ವ್ಯತ್ಯಾಸದ ಮೌಲ್ಯಮಾಪನ ಮಹಾಪ್ರಬಂಧ ಮಂಡಿಸಿದ್ದರು.

ರುಚಿಕಾ ಅವರು ಬಂಟ್ವಾಳ ತಾಲೂಕಿನ ವಾಮದಪದವು ಪಿಲಿಮೊಗರು ಗ್ರಾಮದ ಜಿನ್ನಪ್ಪ ಪೂಜಾರಿ-ಲೀಲಾವತಿ ದಂಪತಿಯ ಪುತ್ರಿ. ಕಾರ್ಕಳ ಪತ್ತೊಂಜಿಕಟ್ಟೆಯ ವಿಠಲ್ ಎಂ. ಸಾಲ್ಯಾನ್ ಹಾಗೂ ವಸಂತಿ ವಿ. ಯವರ ಸೊಸೆ ಹಾಗೂ ರೋಶನ್ ಸಾಲ್ಯಾನ್ ಅವರ ಪತ್ನಿ.

Previous Post Next Post

Contact Form