ಮೂಡುಬಿದಿರೆ, ಏ.20: 6 ವರ್ಷದ ಗಂಡು ಮಗು ಟಿಪ್ಪರಿನಡಿಗೆ ಬಿದ್ದು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಬಜಾಲ್ ನಲ್ಲಿ ಬುಧವಾರ ಸಂಜೆ ನಡೆದಿದೆ.
ಬಜಾಲ್ ಹಟ್ಟಿ ಎಂಬಲ್ಲಿನ ಹಿದಾಯತುಲ್ಲ ಎಂಬವರ ಪುತ್ರ ಝೀಶಾನ್ ಎಂಬ ಪುಟ್ಟ ಬಾಲಕ ಅಪಘಾತಕ್ಕೆ ಬಲಿಯಾದ ನತದೃಷ್ಟ.
ಸಂಜೆ 6 ಗಂಟೆಯ ವೇಳೆಗೆ ಕಟ್ಟಪುಣಿ ಬಳಿಯ ಕೋರ್ದಬ್ಬು ದೈವಸ್ಥಾನದ ಹಿಂಬದಿಯಲ್ಲಿರುವ ರಸ್ತೆಯಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದಾಗ ಘಟನೆ ನಡೆದಿದೆ.
KA 19 AA 8879 ಸಂಖ್ಯೆಯ ಟಿಪ್ಪರ್ ಬಾಲಕ ಝೀಶಾನ್ ಮೇಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Tags
Accident