ಗಂಟಾಲ್ಕಟ್ಟೆಯಲ್ಲಿ ಇನ್ನೊಂದು ಸ್ಪಾಟ್ ಡೆತ್...

ಮೂಡುಬಿದಿರೆ: ಅಪಘಾತ ವಲಯವೆಂದೇ ಪರಿಚಿತವಾಗಿರುವ ಗಂಟಾಲ್ಕಟ್ಟೆಯಲ್ಲಿ ಬೈಕ್ – ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಚಲಾಯಿಸುತ್ತಿದ್ದ ವಾಲ್ಪಾಡಿ ಪುನ್ಕೆದಡಿ ನಿವಾಸಿ, ಕೂಲಿ ಕಾರ್ಮಿಕ ರಮೇಶ್ (38) ಎಂಬವರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಕೂಲಿ ಕೆಲಸದ ರಮೇಶ (38) ಗಂಟಾಲ್ಕಟ್ಟೆಯ ಹೋಟೆಲ್ ನಲ್ಲಿ ಚಹಾ ಸೇವಿಸಿ ಜತೆಗಾರನೊಂದಿಗೆ ಹೋಟೆಲ್ ನಿಂದ ಹೊರಟು  ಸ್ಕೂಟಿಯಲ್ಲಿ ರಸ್ತೆ ತಲುಪುವಷ್ಟರಲ್ಲಿ ವೇಣೂರು ಕಡೆಯಿಂದ ಬಂದ ಬೈಕ್ ಸ್ಕೂಟಿಗೆ ಬಡಿದ ಪರಿಣಾಮ ಸ್ಕೂಟಿ ಮಗುಚಿ ಬಿತ್ತು. ತಲೆಗೆ ತೀವ್ರ ಏಟು ತಗಲಿದ ರಮೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಕೂಟರ್ ಸಹಸವಾರ ಸುಜಿತ್ ಯಾನೆ ಗೋಪಾಲ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದವರಿಗೂ ಗಾಯಗಳಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಮೂಡುಬಿದಿರೆ ಬೆಳ್ತಂಗಡಿ ರಸ್ತೆಯಲ್ಲಿ, ಮೂಡುಬಿದಿರೆ ಮೆಸ್ಕಾಂ ಬಳಿಯಿಂದ ಗಂಟಾಲ್ಕಟ್ಟೆಯವರೆಗೆ ಹಲವಾರು ಅಪಘಾತಗಳು ಅಸಂಭವಿಸಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ರಿ ರಸ್ತೆಯಲ್ಲಿ ಅಪಘಾತ ತಡೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

Previous Post Next Post

Contact Form