ಮೂಡುಬಿದಿರೆ ಪೇಟೆಯೊಳಗೆ ವಾಹನ ದಟ್ಟಣೆ ನಿರಂತರ ಹೆಚ್ಚುತ್ತಿದ್ದು ಇದಕ್ಕೆ ಪರ್ಯಾಯವಾಗಿ ಮೂಡುಬಿದಿರೆ ನಗರಕ್ಕೆ ಹೆಚ್ಚುವರಿ ಸಂಪರ್ಕ ರಸ್ತೆಗಳ ಅಗತ್ಯವಿದ್ದು ಇದಕ್ಕೆ ಪೂರಕವಾಗಿ ಮೂಡಬಿದ್ರೆಯ ವಿದ್ಯಾಗಿರಿಯಿಂದ ಪೇಪರ್ ಮಿಲ್ ವರೆಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು ಇದೀಗ ನನಸಾಗುತ್ತಿದೆ.
ಮೂಡುಬಿದಿರೆ ಜನತೆಯ ಬಹುದಿನಗಳ ಬೇಡಿಕೆಯ ವಿದ್ಯಾಗಿರಿ - ಮಾಸ್ತಿಕಟ್ಟೆ - ಪೇಪರ್ ಮಿಲ್ ರಿಂಗ್ ರೋಡ್ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮತ್ತು ನಗರೋತ್ಥಾನದಿಂದ 6 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾನ್ಯ ಶಾಸಕರಾದ ಉಮಾನಾಥ್ ಅವರು ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ.