ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ.) ಕಿನ್ನಿಗೋಳಿ, ವಿಶ್ವಹಿಂದು ಪರಿಷತ್ ಬಜರಂಗದಳ ಮೂಡುಬಿದಿರೆ ಪ್ರಖಂಡ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಪಾನಕ ಸೇವೆ ನಡೆಯಿತು.
ನಿಡ್ಡೋಡಿ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ.) ಕಿನ್ನಿಗೋಳಿ, ಶ್ಯಾಮ ಹೆಗ್ಡೆ ಕಾರ್ಯಾಧ್ಯಕ್ಷರು ವಿಶ್ವಹಿಂದು ಪರಿಷತ್ ಮೂಡುಬಿದಿರೆ ತಾಲೂಕು, ಎಂ ಶಾಂತರಾಮ ಕುಡ್ವ ಉಪಾಧ್ಯಕ್ಷರು ವಿಶ್ವಹಿಂದು ಪರಿಷತ್ ಮೂಡುಬಿದಿರೆ ತಾಲೂಕು, ಸುಚೇತನ್ ಜೈನ್ ಕಾರ್ಯದರ್ಶಿ ವಿಶ್ವಹಿಂದು ಪರಿಷತ್ ಮೂಡುಬಿದಿರೆ ತಾಲೂಕು,ರಕ್ಷಿತ್ ಸಹಕಾರ್ಯದರ್ಶಿ ವಿಶ್ವಹಿಂದು ಪರಿಷತ್ ಮೂಡುಬಿದಿರೆ ತಾಲೂಕು, ಅವಿನಾಶ್ ಗೋ ರಕ್ಷಾ ಪ್ರಮುಖ್ ಮೂಡುಬಿದಿರೆ ತಾಲೂಕು,ವಿಜೇಶ್ ನಗರ ಸಂಯೋಜಕರು, ಹರೀಶ್ ದೇವಾಡಿಗ ಉದ್ಯಮಿ ಮೂಡುಬಿದಿರೆ ಹಾಗೂ ಘಟಕಗಳ ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಾನಕಸೇವೆಯನ್ನು ಸಾವಿರಕ್ಕೂ ಅಧಿಕ ಮಂದಿ ಪಡೆದುಕೊಂಡರು. ಸೇರಿದ ಭಕ್ತಾದಿಗಳು ರಾಮ ದೇವರಿಗೆ ಪುಷ್ಪಾರ್ಚನೆಗೈದು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪಾನಕ ಸೇವಿಸಿದರು.