ಧಾರವಾಡದ ಮುಸ್ಲಿಂ ವರ್ತಕನ ಕಲ್ಲಂಗಡಿ ಹಣ್ಣು ಧ್ವಂಸ: ದುಷ್ಕರ್ಮಿಗಳ ವಿರುದ್ಧ FIR


ಸಂತ್ರಸ್ತ ನಬಿಸಾಬ್‌‌ ಅವರು ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾಂತ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್‌‌ ಅವರಿಗೆ ಶ್ರೀರಾಮಸೇನೆಯ ಗೂಂಡಾಗಳು ಅಡ್ಡಿಪಡಿಸಿ ಸುಮಾರು ಐದು ಕ್ವಿಂಟಾಲ್‌ ಕಲ್ಲಂಗಡಿಯನ್ನು ಒಡೆದು ಹಾಕಿರುವ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ FIR ದಾಖಲಿಸಲಾಗಿದೆ.

ಸಂತ್ರಸ್ತ ನಬಿಸಾಬ್‌‌ ಅವರು ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಧ್ಯಮಗಳೊಂದಗೆ ಮಾತನಾಡಿರುವ ನಬಿಸಾಬ್, “ನನಗೆ ಆ ಹುಡುಗರ ಮೇಲೆ ಯಾವುದೇ ಕೋಪವಿಲ್ಲ. ನನಗೆ ದೂರು ಕೊಡುವುದು ಸಹ ಇಷ್ಟವಿರಲಿಲ್ಲ. ಆದರೆ ಬಹಳಷ್ಟು ಜನ ಮತ್ತು ಪೊಲೀಸರು ಕಂಪ್ಲೇಂಟ್ ಮಾಡಬೇಕು ಅಂದ ಕಾರಣ ದೂರು ನೀಡಿದ್ದೀನಿ. ಆದರೆ ‘ನನ್ನ ಹಣ್ಣು ಹಾಳು ಮಾಡಿದರು’ ಅಂತ ಕಂಪ್ಲೇಂಟ್ ಕೊಟ್ಟಿದ್ದೀನಿ” ಎಂದು ತಿಳಿಸಿದ್ದಾರೆ.

ನಾನು ಮುಂದೆಯೂ ಸಹ ಅದೇ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಸಾಕು. ಅದಕ್ಕೆ ಅವಕಾಶ ಕೊಡದಿದ್ದರೂ ಪರವಾಗಿಲ್ಲ ಆಂಜನೇಯ ಬಾಬಾನ ದರ್ಶನ ಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿಪರ ಹೋರಾಟಗಾರರಾದ ಬಸವರಾಜ ಸೂಳಿಬಾವಿ, ಪತ್ರಕರ್ತರಾದ ಸಂಗಮೇಶ್ ಮೆಣಸಿನಕಾಯಿ ಮತ್ತು ಮುಸ್ತಫಾ ಕುನ್ನಿಭಾವಿ, ನಾಗರಾಜ ಕಿರಣಗಿ ಸೇರಿದಂತೆ ಹಲವರು ನಬಿಸಾಬ್‌‌ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿ ಧನಸಹಾಯ ಮಾಡಿದ್ದಾರೆ.

(ನಾನು ಗೌರಿ)

Previous Post Next Post

Contact Form