ಹೊಸವರ್ಷಕ್ಕೆ ಶಾಕ್: ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ. 25 ಏರಿಕೆ

ಮಂಗಳೂರು: ಹೊಸವರ್ಷದ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿಯ ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ. 25ರವರೆಗೆ ಏರಿಸಿ ಶಾಕ್ ನೀಡಿವೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಏರಿಸಿಲ್ಲ.


ಇದರಿಂದ ಕಮರ್ಶಿಯಲ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 1768, ಮುಂಬೈಯಲ್ಲಿ ರೂ. 1721, ಕೊಲ್ಕತ್ತಾದಲ್ಲಿ ರೂ. 1870 ಮತ್ತು ಚೆನ್ನೈಯಲ್ಲಿ ರೂ. 1917 ಆಗಿದೆ.

ಸದ್ಯ ಗೃಹಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 1053, ಮುಂಬೈಯಲ್ಲಿ ರೂ. 1052.50, ಕೊಲ್ಕತ್ತಾದಲ್ಲಿ ರೂ. 1079 ಮತ್ತು ಚೆನ್ನೈಯಲ್ಲಿ ರೂ. 1068.50 ಇದೆ.

ಕೋವಿಡ್ ಹೊಡೆತದಿಂದ ತತ್ತರಿಸಿ ಈಗ ಸಹಜ ಸ್ಥಿತಿಗೆ ಮರಳುತ್ತಿರುವ ಹೊಟೇಲು ಮತ್ತಿತರ ಉದ್ಯಮಗಳಿಗೆ ಕಮರ್ಶಿಯಲ್ ಸಿಲಿಂಡರ್ ಬೆಲೆ ಏರಿಕೆಯಿಂದ ಇನ್ನೊಂದು ಹೊಡೆತ ಬಿದ್ದಂತಾಗಿದೆ.

Previous Post Next Post

Contact Form