ಉಡುಪಿ: ಮುಂಬಯಿಯಿಂದ ಉಡುಪಿಗೆ ರೈಲಿನಲ್ಲಿ ಆಗಮಿಸಿದ ಮಹಿಳೆಯ 40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ರೈಲಿನಲ್ಲಿಯೇ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಮುಲುಂಡ್ ನಿವಾಸಿ ದೀಪಾ ರೈ (44) ಅವರು ಡಿಸೆಂಬರ್ 5ರಂದು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಸಹೋದರಿ, ಬಾವ ಮತ್ತು ತಂದೆ ತಾಯಿಯೊಂದಿಗೆ ಕಟಪಾಡಿಯಲ್ಲಿರುವ ಸಂಬಂಧಿಕರ ವಿವಾಹ ಸಲುವಾಗಿ ಬಂದಿದ್ದರು. ಪನ್ವೇಲ್ ನಲ್ಲಿ ರೈಲು ಹತ್ತಿದ ಅವರು 3 ಬ್ಯಾಗುಗಳಲ್ಲಿ ಸೀರೆಗಳೊಂದಿಗೆ ಚಿನ್ನಾಭರಣಗಳನ್ನು ಇಟ್ಟಿದ್ದರು.
ಡಿಸೆಂಬರ್ 6 ಮುಂಜಾನೆ 5:40ಕ್ಕೆ ರೈಲು ಉಡುಪಿ ತಲುಪಿದ್ದು ಕಟಪಾಡಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಕಳವಾದ ಚಿನ್ನಾಭರಣಗಳ ತೂಕ ಸುಮಾರು 850 ಗ್ರಾಂ ಇದ್ದು ಮೌಲ್ಯ 40 ಲಕ್ಷ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.