ಬೆಂಗಳೂರು: ಇಲ್ಲಿನ ಸೆಲೆಬ್ರಿಟಿ ಶ್ವಾನಗಳ ಬ್ರೀಡರ್ ಹಾಗೂ ಡಾಗ್ ಬ್ರೀಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್. ಸತೀಶ್ ಎಂಬವರು ಬರೋಬ್ಬರಿ 20 ಕೋಟಿ ರೂಪಾಯಿಗೆ ಕೌಕಾಶಿಯನ್ ಶೆಫರ್ಡ್ ತಳಿಯ ನಾಯಿಯೊಂದನ್ನು ಖರೀದಿಸಿದ್ದಾರೆ.
ಒಂದೂವರೆ ವರ್ಷದ ನಾಯಿಯ ಹೆಸರು ಕಾಡಬಮ್ ಹೈಯ್ದರ್ ಆಗಿದ್ದು, ಇಷ್ಟೊಂದು ದುಬಾರಿ ಹಾಗೂ ಹೈ ಪ್ರೊಫೈಲ್ ನಾಯಿಯ ಖರೀದಿಯ ಸುದ್ದಿ ಟ್ರೆಂಡಿಂಗ್ ಆಗುತ್ತಿದೆ.
ಫೆಬ್ರವರಿಯಲ್ಲಿ ಮೆಗಾ ಸಂಭ್ರಮದಲ್ಲಿ ಸತಿಶ್ ಅವರು ತಮ್ಮ ನಾಯಿಯನ್ನು ಶ್ವಾನಪ್ರಿಯರಿಗೆ ಪರಿಚಯಿಸಲಿದ್ದಾರೆ...!
ಕೌಕಾಶಿಯನ್ ಶೆಫರ್ಡ್ ತಳಿಯ ನಾಯಿಗಳು ಸರಾಸರಿ 30 ಇಂಚು ಎತ್ತರದವರೆಗೂ ಬೆಳೆಯುತ್ತವೆ ಹಾಗೂ 55 ರಿಂದ 77 ಕೆಜಿ ತೂಗುತ್ತವೆ. 10 ರಿಂದ 20 ವರ್ಷ ಈ ನಾಯಿಗಳ ಜೀವಿತಾವಧಿಯಾಗಿರುತ್ತದೆ.
ಸತೀಶ್ ಅವರಲ್ಲಿ ಈಗಾಗಲೇ 1 ಕೋಟಿ ರೂಪಾಯಿ ಬೆಲೆಯ ಕೊರಿಯನ್ ದೋಸಾ ಮಸ್ತಿಫ್, 10 ಕೋಟಿ ರೂಪಾಯಿ ಬೆಲೆಯ ಟಿಬೆಟನ್ ಮಸ್ತಿಫ್ ಅಲ್ಲದೆ 8 ಕೋಟಿ ಬೆಲೆಯ ಅಲಾಸ್ಕನ್ ನಾಯಿಗಳೂ ಇವೆ.