ಅಮ್ರೋಹಾ: ಸಂಬಂಧಿಕರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಸಿಡಿದು ಯುವಕನಿಗೆ ಗಾಯಗಳಾಗಿರುವ ಘಟನೆ ಉತ್ತರಪ್ರದೇಶದಲ್ಲಿ ಸಂಭವಿಸಿದೆ.
ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗಲೇ ಮೊಬೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಯುವಕನ ಕೈಬೆರಳುಗಳಿಗೆ ಗಾಯವಾಗಿದೆ. ಹಿಜಾಂಪುರ ಎಂಬ ಹಳ್ಳಿಯ ಯುವಕ ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ಅಮ್ರೋಹಾದಿಂದ ಮೊಬೈಲ್ ಖರೀದಿಸಿದ್ದರು.
ಪ್ರಥಮ ಚಿಕಿತ್ಸೆಗಾಗಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.