ನೆತ್ತೋಡಿ ಸತ್ಯ ಸಾರಮಣಿ ದೈವಸ್ಥಾನ ವಾರ್ಷಿಕ ಮಹೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

News: Premashree Kallabettu

ಮೂಡುಬಿದಿರೆ: ಸತ್ಯಸಾರಮಣಿ ದೈವಸ್ಥಾನ ನೆತ್ತೋಡಿ- ಮಾರೂರು ಇದರ ವಾರ್ಷಿಕ ನೇಮೋತ್ಸವವು ಫೆ. 16, 17ರಂದು ನಡೆಯಲಿದ್ದು ಆ ಪ್ರಯುಕ್ತ ಭಾನುವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಮಾರೂರು ಗುತ್ತುವಿನ ಶಂಭು ಶೆಟ್ಟಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ದೈವಸ್ಥಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪಾಳ್ಯ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಸುರೇಶ್ ದೇರಾಡಿ, ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನ ಇದರ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ  ಮಂಜದಡಿ ಸುನೀಲ್ ಶೆಟ್ಟಿ, ಭಾಸ್ಕರ ಆಚಾರ್ಯ, ಸಮಿತಿಯ ಸುರೇಶ್ ದೇವಾಡಿಗ, ಮಾರೂರು ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ಸುಂದರ್ ಲೋಕಲ್ಕೆ, ಹಿರಿಯರಾದ ಶೇಖರ ನೆತ್ತೋಡಿ, ಮಾಜಿ ಅಧ್ಯಕ್ಷ ರವೀಂದ್ರ ನೆತ್ತೋಡಿ, ಮಾಜಿ ಕಾರ್ಯದರ್ಶಿ ರಾಜು ಗಂಟಾಲ್ ಕಟ್ಟೆ ಹಾಗೂ ಊರಿನ ಗ್ರಾಮಸ್ಥರು, ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿದ್ದರು.

Previous Post Next Post

Contact Form