ಮೂಡುಬಿದಿರೆ: ಈ ಪ್ಯಾನ್-ಆಧಾರ್ ಲಿಂಕ್ ಇಲ್ಲಿಯವರೆಗೂ ಇನ್ನೂ ಲಿಂಕ್ ಮಾಡದೇ ಇರುವವರು ಅದನ್ನು ಈ ತಿಂಗಳು ಅಂದರೆ ಮಾರ್ಚ್ 31ರ ವರೆಗೂ ಮಾಡಬಹುದಾಗಿದೆ. ಈ ಅವಧಿಯೊಳಗೂ ಯಾರೇ ಆಗಲಿ ತಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದೆ ಹೋದಲ್ಲಿ ಅವರ ಪಾನ್ ಸಂಖ್ಯೆಯು ಬರುವ ಏಪ್ರಿಲ್ 1, 2023 ರಿಂದ ನಿಷ್ಕ್ರಿಯಯವಾಗಲಿದೆ.
ಅನಿವಾಸಿ ಭಾರತೀಯರು ಹಾಗೂ 80ಕ್ಕಿಂತಲೂ ಹೆಚ್ಚಿನ ವಯೋಮಾನದವರು ಪ್ಯಾನ್-ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿರುತ್ತಾರೆ.
ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಅಂತ ನಿಮಗೆ ತಿಳಿಯಬೇಕಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ. https://eportal.incometax.gov.in/iec/foservices/#/pre-login/link-aadhaar-status
ಆಗ ಆದಾಯ ತೆರಿಗೆ ವಿಭಾಗದ ಪೇಜ್ ತೆರೆದುಕೊಳ್ಳುತ್ತದೆ. ಆ ಪೇಜ್ನಲ್ಲಿ ನಿಮ್ಮ ಪ್ಯಾನ್ ನಂಬರ್ ಮತ್ತು ಆಧಾರ್ ನಂಬ್ರ ಹಾಕಿ. View Link Aadhar Status ಬಟನ್ ಕ್ಲಿಕ್ ಮಾಡಿ.
ಆಗ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯಾ ಇಲ್ಲವಾ ಎಂಬ ಮಾಹಿತಿ ದೊರೆಯುತ್ತದೆ.
ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದೇ ಇದ್ದಲ್ಲಿ ಕೂಡಲೇ ಲಿಂಕ್ ಮಾಡಿಸಿಕೊಳ್ಳಿ.