ಮೂಡುಬಿದಿರೆಯ ಹಿರಿಯ ವಾಣಿಜ್ಯ ಲೆಕ್ಕಿಗ ಕೆ. ವಾಮನ ಕಿಣಿ ನಿಧನ


ಮೂಡುಬಿದಿರೆ: ಹಿರಿಯ ಕಮರ್ಷಿಯಲ್ ಅಕೌಂಟೆಂಟ್ ಆಗಿದ್ದ ಕೆ.ವಾಮನ ಕಿಣಿ  (88) ಶನಿವಾರ ಲಾವಂತ ಬೆಟ್ಟು ಜಿ.ವಿ.ಪೈ ನಗರದಲ್ಲಿನ ತಮ್ಮ ರುದ್ರ ಶಕ್ತಿ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತ್ನಿಯನ್ನು ಅಗಲಿದ್ದಾರೆ.

ಮೂಲತಃ ಕಟೀಲಿನವರಾಗಿದ್ದ ವಾಮನ ಕಿಣಿ ಎಳೆಯ ವಯಸ್ಸಿನಲ್ಲೇ ಕಮರ್ಷಿಯಲ್ ಅಕೌಂಟೆಂಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.

ಮೂಡುಬಿದಿರೆಯಲ್ಲಿ ಲೆಕ್ಕ ಪರಿಶೋಧಕರ ಕಾರ್ಯನಿರ್ವಹಣೆ ಆರಂಭವಾಗುವುದಕ್ಕೂ ಮೊದಲು ಅಂಗಡಿ ವರ್ತಕರ ಕಮರ್ಷಿಯಲ್ ಅಕೌಂಟ್ ಬರೆಯುವಲ್ಲಿ ಮುಂಚೂಣಿಯಲ್ಲಿದ್ದು ಹಳೇ ಪೋಲೀಸ್ ಠಾಣೆಯ ಬಳಿ ತಮ್ಮ ಕಛೇರಿ ನಿರ್ವಹಿಸಿ ಮುನ್ನೂರೈವತ್ತಕ್ಕೂ ಹೆಚ್ಚಿನ ಸಣ್ಣ ವ್ಯಾಪಾರಿಗಳ ಲೆಕ್ಕ ಬರೆಯುವ , ಮಾರಾಟ ತೆರಿಗೆ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದರು.

ಎಲ್ ಐಸಿ ಪ್ರತಿನಿಧಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಅಧ್ಭುತ ಸ್ಮರಣ ಶಕ್ತಿ, ಅಧಿಕಾರಿಗಳ ಜತೆಗೆ ಉತ್ತಮ ಬಾಂಧವ್ಯದಿಂದ ಗುರುತಿಸಿಕೊಂಡಿದ್ದರು.

Previous Post Next Post

Contact Form