ಜೈಲಿನ ವಿಐಪಿ ರೂಮಿನಲ್ಲಿ ಸಮಿತ್‌ರಾಜ್ ಭೇಟಿಯಾದ ಉಮಾನಾಥ ಕೋಟ್ಯಾನ್: ಮಿಥುನ್ ರೈ ಆರೋಪ


ಮೂಡುಬಿದಿರೆ: ಮೊಬೈಲಿನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳ ಪ್ರಕರಣದ ಆರೋಪಿ ಸಮಿತ್‌ರಾಜ್ ದರೆಗುಡ್ಡೆ ಹಾಗೂ ತನಗೂ ಯಾವುದೇ ಸಂಬAಧವಿಲ್ಲವೆAದು ಹೇಳಿಕೆ ನೀಡಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರು, ಜೂನ್ 26ರಂದು ಆರೋಪಿಯನ್ನು ಜೈಲಿನಲ್ಲಿ ವಿಐಪಿ ಕೊಠಡಿಗೆ ಕರೆಸಿ ಭೇಟಿ ಮಾಡಿರುವ ಅರ್ಥವೇನು?. ಶಾಸಕರು ತನ್ನ ಆಪ್ತ ಸಮಿತ್‌ರಾಜ್‌ಗೆ ಯಾವ ವಿಚಾರದಲ್ಲಿ ಹೆದರುತ್ತಿದ್ದಾರೆ? ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಸುದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. 

ಕೋಟ್ಯಾನ್ ಅವರು ಒಬ್ಬ ನೈಜ ಕಲಾವಿದ ಎನ್ನುವುದು ಅವರ ಹೇಳಿಕೆಯಿಂದ ಸಾಬೀತಾಗಿದೆ. ಅವರು ಹೇಳುವುದು ಒಂದು ಮಾಡುವುದು ಬೇರೆಯೇ. ನನಗಾಗಲೀ, ಅಭಯಚಂದ್ರ ಜೈನ್ ಅವರಿಗಾಗಲಿ ಅವರ ಹಾಗೆ ನಟನೆ ಮಾಡಲು ಬರುವುದಿಲ್ಲ. ನಾವು ಏನಿದ್ದರೂ ನೇರವಾಗಿ ಹೇಳಿಬಿಡುತ್ತೇವೆ, ಮುಂದಿನ ದಿನಗಳಲ್ಲಿ ಉಮಾನಾಥ ಕೋಟ್ಯಾನ್-ಸಮಿತ್‌ರಾಜ್‌ನ ಎಲ್ಲ ವಿಷಯಗಳನ್ನು ಜನರ ಮುಂದಿಡಲಿದ್ದೇವೆ ಎಂದರು. ಆರೋಪಿಯನ್ನು ಜೈಲಿಗೆ ಹೋಗಿ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿಡಿಯೋ ಕೂಡಾ ಆತನಲ್ಲಿರಬಹುದೇ ಎಂಬ ಸಂಶಯ ಬರುತ್ತಿದೆ ಎಂದರು.

ಹಿAದೂ ಸಂಘಟನೆಯ ಕಾರ್ಯಕರ್ತರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ ಎನ್ನುವ ಶಾಸಕರು ಅದೇ ಕಾರ್ಯಕರ್ತನಿಂದ ಅನ್ಯಾಯವಾದವರಿಗೆ ಯಾಕೆ ಧೈರ್ಯ ಹೇಳಲ್ಲ? ಅದೇ ಜೈಲಿನಲ್ಲಿ ಮೂಡುಬಿದಿರೆಯ ಹಿಂದೂ ಸಂಘಟನೆಯ ಇತರ ಕಾರ್ಯಕರ್ತರಿದ್ದರೂ ಅವರಲ್ಲಿ ಮಾತನಾಡದೆ ಕೇವಲ ಸಮಿತ್‌ರಾಜ್ ಒಬ್ಬನಲ್ಲೇ ಮಾತನಾಡಿ ಬಂದಿದ್ದಾರೆ ಎಂದರು. 

ನಾನು ಹೆಣ್ಮಕ್ಕಳನ್ನು ಕುಣಿಸಿ ಹಣಮಾಡುತ್ತೇನೆಂದು ಹೇಳಿ ನನ್ನ ತೇಜೋವಧೆ ಮಾಡಿದ್ದಾರೆ. ನಾನು ಪ್ರತಿಷ್ಠಿತ ವೈದ್ಯ ಕುಟುಂಬದಿAದ ಬಂದವನು. ನನಗೆ ಆ ರೀತಿ ಹಣ ಮಾಡುವ ಅಗತ್ಯವೇ ಇಲ್ಲ. ನನಗೆ ಬಾರ್, ರೆಸ್ಟೊರೆಂಟ್, ಹೋಟೆಲ್ ವ್ಯವಹಾರ ಇದ್ದದ್ದು ನಿಜ. ಆದರೆ 10 ವರ್ಷದ ಹಿಂದೆಯೇ ಅವಗಳನ್ನು ಬೇರೆಯವರಿಗೆ ಕೊಟ್ಟಿದ್ದೇನೆ. ಆದರೆ ಹೆಣ್ಮಕ್ಕಳನ್ನು ಕುಣಿಸಿ ವ್ಯವಹಾರ ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ. ಜಿಲ್ಲೆಯಲ್ಲಿ ಲೈವ್‌ಬ್ಯಾಂಡ್, ಕ್ಯಾಬರೆ ಬಂದ್ ಆಗಿ 25 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ. ಆದರೆ ನನ್ನ ತೇಜೋವಧೆ ಮಾಡುವ ಕಾರಣಕ್ಕೆ ಅವರು ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿ ತೇಜೋವಧೆ ಮಾಡಿದ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.

Previous Post Next Post

Contact Form