![]() |
ಸಮಿತ್‌ರಾಜ್ ದರೆಗುಡ್ಡೆ |
ಮೂಡುಬಿದಿರೆ: ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಸಮಿತ್‌ರಾಜ್ ದರೆಗುಡ್ಡೆ ಮೊಬೈಲ್ ಅಶ್ಲೀಲ ವಿಡಿಯೋ ಪ್ರಕರಣ ಎಫ್‌ಎಸ್‌ಎಲ್ ವರದಿ ಇನ್ನೆರಡು ದಿನಗಳಲ್ಲೇ ಬರಲಿದೆ ಎಂದು ಮೂಡುಬಿದಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾಹಿತಿ ನೀಡಿದರು.
ಸಮಿತ್‌ರಾಜ್ ಮೊಬೈಲಿನಲ್ಲಿರುವ ವೀಡಿಯೋಗಳಲ್ಲಿ ಯರ‍್ಯಾರಿದ್ದಾರೆ ಎಂಬ ಬಗ್ಗೆ ಎಲ್ಲಾ ಮಾಹಿತಿ ನನಗಿದೆ. ಟುಸ್ ಪಟಾಕಿ ಬಿಡುವವ ನಾನಲ್ಲ. ಇನ್ನು ಎರಡು ದಿನಗಳಲ್ಲಿ ಸಂತ್ರಸ್ತರು ಸಮಿತ್‌ರಾಜ್ ವಿರುದ್ಧ ದೂರು ದಾಖಲಿಸಲಿದ್ದಾರೆ ಎಂದು ಅವರು ಹೇಳಿದರು.
ಸಮಿತ್‌ರಾಜ್ ಅವರಿಂದ ಅನ್ಯಾಯಕ್ಕೊಳಗಾದವರು ನಮ್ಮನ್ನು ಧೈರ್ಯವಾಗಿ ಸಂಪರ್ಕಿಸಬಹುದು. ಈಗಿನ ಕಮಿಷನರ್ ಅವರು ದಿಟ್ಟ ಅಧಿಕಾರಿಯಾಗಿದ್ದು ಸಂತ್ರಸ್ತರ ಹೆಸರನ್ನು ಗೌಪ್ಯವಾಗಿಟ್ಟು ನ್ಯಾಯ ದೊರಕಿಸಿ ಕೊಡುವ ವಿಶ್ವಾಸವಿದೆ ಎಂದರು.