ಮುಂಬಯಿ (ಆರ್‌ಬಿಐ), ಅ.09: ಕೇಂದ್ರೀಯ ಮಾಜಿ ಗೃಹ ಸಚಿವ, ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಷ್ಟ್ರವಾದಿ ಪಕ್ಷ (ಎನ್‌ಸಿಪಿ)ದ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ಅವರನ್ನು ಇಂದಿಲ್ಲಿ ಬ್ರೀಜ್‌ಕೇಂಡಿ ಅಲ್ಲಿನ ಪವಾರ್ ಅವರ ಸ್ವನಿವಾಸ ಸಿಲ್ವರ್ ಓಕ್ ನಿವಾಸದಲ್ಲಿ ಮೂರು ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಶೆಟ್ಟಿ ಪರಿವಾರ ಎಂದೇ ನಾಮಾಂಕಿತ ತುಳುಕನ್ನಡಿಗರಲ್ಲಿನ ಕ್ರೀಡಾ ಸಾಧಕರಾದ ಜಯ ಎ. ಶೆಟ್ಟಿ, ಛಾಯಾ ಜೆ. ಶೆಟ್ಟಿ (ಪತ್ನಿ), ಗೌರವ್ ಜೆ. ಶೆಟ್ಟಿ (ಸುಪುತ್ರ) ಭೇಟಿಗೈದು ಅಭಿನಂದಿಸಿದರು.
ಹಿರಿಯ ರಾಜಕಾರಣಿ, ಮಹಾರಾಷ್ಟ್ರ ಕಬಡ್ಡಿ ಅಸೋಸಿಯೇಶನ್‌ನ ಅಜೀವ ಅಧ್ಯಕ್ಷ, ಏಷಿಯಾನ್ ಕಬ್ಬಡ್ಡಿ ಫೆಡರೇಶನ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ತನ್ನ ಪರಮಾಪ್ತರೂ ಆಗಿರುವ ಶರದ್ ಪವಾರ್ ಅವರನ್ನು ಭೇಟಿಗೈದ ಜಯ ಎ.ಶೆಟ್ಟಿ ಕಬಡ್ಡಿ ಮತ್ತಿತರ ಕ್ರೀಡಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಪವಾರ್ ಮಾತುಕತೆ ನಡೆಸಿದರು. ಶೆಟ್ಟಿ ಪರಿವಾರದೊಂದಿಗೆ ಪವಾರ್ ಅವರೂ ಕುಶಲೋಪರಿ ನಡೆಸಿ ಶುಭಾರೈಸಿದರು.
Tags
Rons-Bantwal
