ಮನೆ ಬಳಿ ಹೊಂಚು ಹಾಕುತ್ತಿದ್ದ ಚಿರತೆ ಬಲೆಗೆ


ಮೂಡುಬಿದಿರೆ:  ಮನೆಯ ಬೇಲಿಯ ಬಳಿಯಲ್ಲಿ ಆಹಾರಕ್ಕಾಗಿ ತಿರುಗಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಹಿಡಿದಿದ್ದು ನಂತರ ಕಾಡಿಗೆ ಬಿಡಲಾಯಿತು. ಹೆಬ್ರಿ–ಕಾರ್ಕಳ ಗಡಿಭಾಗದ ಪದುಕುದೂರು ಗ್ರಾಮದ ತಿಮ್ಮಪ್ಪ ಪೂಜಾರಿ ಅವರ ಮನೆಯ ಬಳಿ ಚಿರತೆ ಆಹಾರಕ್ಕಾಗಿ ಹೊಂಚು ಹಾಕುತ್ತಿತ್ತು.

ಮನೆಯ ಬಳಿಯಲ್ಲಿ ಚಿರತೆ ಕುಳಿತಿರುವುದನ್ನು ಮನೆ ಮಂದಿ ಗಮನಿಸಿದ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಪಂಜರವನ್ನು ಬಳಸಿ ಕಾರ್ಯಾಚರಣೆ ಪ್ರಾರಂಭಿಸಿದರು. ಸುಮಾರು ಎರಡು ಗಂಟೆಗಳ ಕಾಲ ಎಚ್ಚರಿಕಾ ಕ್ರಮಗಳೊಂದಿಗೆ ನಡೆಸಿದ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿನತ್ತ ಕೊಂಡೊಯ್ಯಲಾಯಿತು.

ಸುಮಾರು ಮೂರು ವರ್ಷ ಪ್ರಾಯದ ಚಿರತೆಯನ್ನು ವೈದ್ಯಕೀಯ ತಪಾಸಣೆಯ ನಂತರ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯಾಧಿಕಾರಿಗಳು ಕರುಣಾಕರ್ ಆಚಾರ್ಯ, ಚಂದ್ರಕಾಂತ್ ಪೋಲ್, ರೋಹಿಣಿ, ಅರಣ್ಯ ರಕ್ಷಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.


x

Previous Post Next Post

Contact Form