ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್., ಕಾರ್ಯದರ್ಶಿಯಾಗಿ ರಾಜೇಶ್ ಕೆ. ಆಯ್ಕೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್. ಆಯ್ಕೆಯಾಗಿದ್ದಾರೆ. ರಾಜೇಶ್ ಕೆ. ಪೂಜಾರಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿಜಯ್ ಕೋಟ್ಯಾನ್ ಪಡು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಭಾನುವಾರ ಮಂಗಳೂರಿನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಒಟ್ಟು 352 ಮತದಾರರ ಪೈಕಿ 331 ಮಂದಿ ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಪುಷ್ಪರಾಜ್ ಬಿ. ಎನ್. ಅವರು ತಮ್ಮ ಪ್ರತಿಸ್ಪರ್ಧಿ ಶ್ರವಣ್ ಕುಮಾರ್ ಅವರನ್ನು ಸೋಲಿಸಿದರು.

ಮಹಮ್ಮದ್ ಅರಿಫ್ ಪಡುಬಿದ್ರೆ, ವಿಲ್ಫ್ರೆಡ್ ಡಿಸೋಜಾ, ಮತ್ತು ರಾಜೇಶ್ ಶೆಟ್ಟಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಐ. ಬಿ. ಸಂದೀಪ್ ಕುಮಾರ್ ಮತ್ತು ಗಂಗಾಧರ ಕಲ್ಲಪ್ಪಳ್ಳಿ ಅವರು ಈ ಸ್ಥಾನಕ್ಕಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.

ಸಿದ್ದಿಕ್ ನೀರಜೆ, ಸುರೇಶ್ ಡಿ. ಪಳ್ಳಿ, ಮತ್ತು ಸತೀಶ ಇರಾ ಅವರನ್ನು ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು ರಾಜೇಶ್ ದಡ್ಡಂಗಡಿ ಸೋತಿದ್ದಾರೆ.

ಕಾರ್ಯಕಾರಿ ಸಮಿತಿಗೆ ಅಶೋಕ್ ಶೆಟ್ಟಿ ಬಿ. ಎನ್., ಸಂದೇಶ್ ಜಾರಾ, ಸಂದೀಪ್ ಕುಮಾರ್, ಲಕ್ಷ್ಮೀನಾರಾಯಣ, ಹರೀಶ್ ಮೊಟುಕಾನ, ದಿವಾಕರ ಪಡುಮುಂಜ, ಕಿರಣ್ ಸಿರ್ಸಿಕರ್, ಅಭಿಷೇಕ್ ಎಚ್. ಎಸ್., ಜಯಶ್ರೀ, ಭುವನೇಶ್ವರ, ಸಂದೀಪ್ ವಾಗ್ಲೆ, ಹರೀಶ್ ಕೆ. ಆದೂರು, ಗಿರೀಶ್ ಅಡಪಂಗಾಯ, ಸಂದೀಪ್ ಸಾಲ್ಯಾನ್ ಮತ್ತು ಅರಿಫ್ ಕಲ್ಕಟ್ಟಾ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ತಮ್ಮ ಪ್ರತಿಸ್ಪರ್ಧಿ ಅನ್ಸಾರ್ ಇನೋಳಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.

ಚುನಾವಣಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಅವರು ಕಾರ್ಯನಿರ್ವಹಿಸಿದರು.

Previous Post Next Post

Contact Form