ಜೈಸನ್ ತಾಕೊಡೆ
ಮೂಡುಬಿದಿರೆ: ಇಲ್ಲಿನ ಜೈನ ಪಿಯು ಕಾಲೇಜಿನ ಮುಂಭಾಗದಿಂದ ಬೆಟ್ಕೇರಿ ಗ್ಯಾಸ್ ಗೋಡೌನ್ ಕಡೆ ಹೋಗುವ ರಸ್ತೆಯಲ್ಲಿ ಆಡಳಿತ ನಡೆಸುವವರ ಕೃಪೆಯಿಂದ ಒಂದು ಅಮ್ಯೂಸ್ಮೆಂಟ್ ಪಾರ್ಕ್ ಸೃಷ್ಟಿಯಾಗಿದೆ.
ರಸ್ತೆಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾದಂತಿದೆ. ನೆಪ ಮಳೆರಾಯ, ಕೃಪೆ ಪುರಸಭೆ. ಮಳೆ ಒಂದಿಷ್ಟು ಬಿಡುವು ನೀಡಿದ್ದರೂ ಈ ರಸ್ತೆಗೆ ತೇಪೆ ಭಾಗ್ಯ ಮಾತ್ರ ಇನ್ನೂ ದೊರೆತಿಲ್ಲ. ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳಿಗೆ ಇಲ್ಲಿ ನಿತ್ಯ ಸಂಚರಿಸುವ ಜನ ‘ಹಾವಾದ್ರೂ ಕ*ಬಾರ್ದಾ.. ಚೇಳಾದ್ರೂ ಚು*ಬಾರ್ದಾ....’ ಅಂತ ಹಿಡಿ ಶಾಪ ಹಾಕುತ್ತಿರಬಹುದು.
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ಇಲ್ಲಿಂದ ಹೋಗುವ ವಾಹನಗಳು ಪಿಚಕ್ಕೆಂದು ಕೆಸರು ಹಾರುವುದು ದಿನನಿತ್ಯದ ದೃಶ್ಯ... ನಿಮಗೆ ವೋಟು ಹಾಕಿ ಧನ್ಯರಾದೆವು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಅಂದಹಾಗೆ ಮೋಟಾರು ಸಾಹಸ ಪ್ರಿಯರು ಆಫ್ ರೋಡಿಂಗ್ ಮಾಡುವುದಕ್ಕೆ ದೂರದ ಊರುಗಳಿಗೆ ಹೋಗಬೇಕಿಲ್ಲ... ಇಲ್ಲೇ ಆಫ್ ರೋಡಿಂಗ್ ಮಾಡುವುದಕ್ಕೆ ಸಕಲ ವ್ಯವಸ್ಥೆ ಮಾಡಿದಂತಿದೆ.
ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಬರುವಾಗ ರಾತ್ರೋರಾತ್ರಿ ಇಡೀ ಊರಿಗೆ ಡಾಮಾರೀಕರಣ ಮಾಡಲು ಆಗುತ್ತದೆ. ಆದರೆ ಇಲ್ಲಿನ ಒಂದು ಐವತ್ತು ಅಡಿ ರಸ್ತೆಗೆ ಡಾಮಾರೀಕರಣ ಮಾಡುವ ಯೋಗ್ಯತೆ ನಮ್ಮವರಿಗಿಲ್ಲ.... ಛೀ....


